ದೋಷಪೂರಿತ ಜಾತಿಗಣತಿ ಜಾರಿಗೆ ಬದಲು ಮನೆ ಮನೆಗೆ ತೆರಳಿ ಮರುಗಣತಿ ಮಾಡಬೇಕು: ಶಾಸಕ ನಿಖಿಲ ಕತ್ತಿ

ಶಾಸಕ ನಿಖಿಲ ಕತ್ತಿ ಅವರ ಭಾವಚಿತ್ರ.

ಹುಕ್ಕೇರಿ : ರಾಜ್ಯ ಸರಕಾರ 10 ವರ್ಷಗಳ ಹಿಂದೆ ಕಾಟಾಚಾರಕ್ಕೆ ಮಾಡಿದ ಜಾತಿಗಣತಿ ದೋಷಪೂರಿತವಾಗಿದೆ.ತಕ್ಷಣ ಇದನ್ನು ಜಾರಿಗೆ ತರುವ ಬದಲು ಮನೆ ಮನೆಗೆ ತೆರಳಿ ಮತ್ತೊಮ್ಮೆ ಮರುಗಣತಿ ಮಾಡಬೇಕೆಂದು ಶಾಸಕ ನಿಖಿಲ ಕತ್ತಿ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಶುಕ್ರವಾರದಂದು ಬೆಲ್ಲದ ಬಾಗೇವಾಡಿಯ ಶಾಸಕರ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲೆಡೆ ಜನರನ್ನು ಜಾತಿಗಣತಿ ಕುರಿತು ಪ್ರಸ್ತಾಪಿಸಿದರೆ ಯಾವಾಗ ಮಾಡಿದ್ದಾರೆ.ನಮಗೆ ಗೊತ್ತಿಲ್ಲವೆಂಬ ಪ್ರಶ್ನೆ ಸರ್ವೆ ಸಾಮಾನ್ಯವಾಗಿದೆ. ಹಾಗಾದರೆ 10 ವರ್ಷಗಳ ಹಿಂದಿನ ಜಾತಿಗಣತಿ ಮುಸ್ಲಿಮ್ ಸಮಾಜ ಹೊರತು ಪಡಿಸಿ ಬಹು ಸಂಖ್ಯಾತ ಲಿಂಗಾಯತ, ಒಕ್ಕಲಿಗ ಹಾಗೂ ಇನ್ನೂಳಿದ ಎಲ್ಲ ಸಮಾಜಗಳನ್ನು ಹೆದರಿಸಲು ಈ ಅವೈಜ್ಞಾನಿಕ ಗಣತಿ ಜಾರಿಗೊಳಿಸುತ್ತಿರ ಬಹುದೆಂಬ ಅನುಮಾನ ಕಾಡುತ್ತಿದೆ ಎಂದರು.

ಕೆಲವು ಸಚಿವರು ಇದು ರ‍್ಥಿಕ, ಸಾಮಾಜಿಕ ಮತ್ತು ಶೈಕ್ಷಣೀಕ ಸಮೀಕ್ಷಾ ಗಣತಿ ಎಂದು ಹೇಳುತ್ತಿದ್ದಾರೆ.ಹಾಗಾದರೆ ಈ ಗಣತಿ ಬಿಡುಗಡೆಯಲ್ಲಿ ಇವುಗಳ ಪ್ರಸ್ತಾಪ ಆಗಿಲ್ಲವೇಕೆಂದು ಪ್ರಶ್ನಿಸಿದರು.ಇನ್ನಾದರೂ ಜಾತಿ ಗಣತಿ ಜಾರಿ ಮಾಡುವ ಮುನ್ನ ಪ್ರಸಕ್ತ ರ‍್ಷದ ನಿಖರ ಸಮೀಕ್ಷೆ ಮಾಡಿ ಜನರ ಮುಂದಿಡಬೇಕೆಂದು ಒತ್ತಾಯಿಸಿದ್ದಾರೆ.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಮತ್ತು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಮಾತನಾಡಿ ಹುಕ್ಕೇರಿ ಮತಕ್ಷೇತ್ರದಲ್ಲಿಯೇ ಒಂದು ಲಕ್ಷ ಮೇಲ್ಪಟ್ಟು ಲಿಂಗಾಯತ ಸಮಾಜದವರಿದ್ದಾರೆ.ಇದೇ ರೀತಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಸಮೀಕ್ಷೆ ನಡೆಸಿದರೆ ಒಂದು ಕೋಟಿಗೂ ಅಧಿಕ ಲಿಂಗಾಯತರು ಇರುವರು.ಇದರ ಜೊತೆಗೆ ರಾಜ್ಯದ ಎಲ್ಲೆಡೆ ಲಿಂಗಾಯತರು ಇದ್ದಾರೆ. ಒಳಪಂಗಡದ ಹೆಸರಲ್ಲಿ ವಿಭಜಿಸಿ ಬಹು ಸಂಖ್ಯಾತರನ್ನು ಅಲ್ಪಸಂಖ್ಯಾತರನ್ನಾಗಿ ತೋರಿಸುತ್ತಿರುವುದು ಹಾಸ್ಯಾಸ್ಪದ ಎಂದರು. ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗ ಸಮಾಜದ ಜನ ಹೆಚ್ಚಾಗಿದ್ದಾರೆ.ಅವರಲ್ಲೂ ಒಳಪಂಗಡಗಳ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನಾಗಿ ಬಿಂಬಿಸುತ್ತಿದ್ದಾರೆ.ಆದರೆ ಮುಸ್ಲಿಮ್ ಸಮಾಜದ ಒಳ ಪಂಗಡಗಳನ್ನು ಏಕೆ ಸಮೀಕ್ಷೆಯಲ್ಲಿ ತೋರಿಸಿಲ್ಲವೆಂಬ ಪ್ರಶ್ನೆ ಕಾಡುತ್ತಿದೆ ಎಂದರು. 10 ವರ್ಷಗಳ ಹಿಂದಿನ ಕಾಟಾಚಾರದ ಗಣತಿ ಮುಂದಿಟ್ಟುಕೊಂಡು ರಾಜಕೀಯ ಹುನ್ನಾರ ನಡೆಸುತ್ತಿದ್ದಾರೆಂಬ ಸಂಶಯ ಜನರದ್ದಾಗಿದೆ. ಇದರ ಬದಲಾಗಿ ಜನರ ಆರ್ಥಿಕ ಸಮೀಕ್ಷೆ ನಡೆಸಿ ಬಡ ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚಿನ ಸೌಲಭ್ಯ ಮತ್ತು ಮೀಸಲಾತಿ ಕಲ್ಪಿಸಿದರೆ ಇವರು ಜನ ಸಾಮಾನ್ಯರ ಹಿತ ಬಯಸುತ್ತಿದ್ದಾರೆಂಬುದು ಸಾಬೀತವಾಗುತ್ತದೆ ಎಂದರು.

ಲಿಂಗಾಯತ ಮಠಾಧೀಶರು ಸಮಾಜದ ಅಸ್ತಿತ್ವಕ್ಕೆ ಸಂಚಕಾರ ತರಲು ಮುಂದಾಗಿರುವ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಪ್ರಶ್ನಿಸಬೇಕು.ಒಳಪಂಗಡ ಸೇರಿದಂತೆ ಎಲ್ಲ ಸಮಾಜಗಳ ಮಠಾಧೀಶರು ಒಂದಾಗಿ ಜಾತಿಗಣತಿ ಜಾರಿ ವಿರೋಧಿಸಬೇಕೆಂದು ವಿನಂತಿಸಿಕೊಂಡರು.

ಆಡಳಿತ ಪಕ್ಷದ ಸಚಿವರು, ಶಾಸಕರೇ ಜಾತಿಗಣತಿ ಕುರಿತು ಅಪಸ್ವರ, ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನರಿತಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿಗಣತಿ ಮರು ಸಮೀಕ್ಷೆ ಮಾಡಿಸಬೇಕೆಂದು ಮನವಿಸಿತ್ತೇನೆ. ನಿಖಿಲ ಕತ್ತಿ ಶಾಸಕರು

Leave a Reply

Your email address will not be published. Required fields are marked *

error: Content is protected !!