ಹುಕ್ಕೇರಿ: ಬಾಗವಾನ ಗಲ್ಲಿಯ ಮೀರಾಸಾಬ್ ಬಾಗವಾನ ಎಂಬುವವರ ಮನೆ ಸುಟ್ಟು ಭಸ್ಮವಾಗಿದೆ. ಎರಡನೆ ಮಹಡಿಯಲ್ಲಿದ್ದ ತಗಡಿನ ಪತ್ರಾಸ್ ನ ಮನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಹೊತ್ತಿ ಉರಿದ ಪರಿಣಾಮ ಮನೆಯಲ್ಲಿದ್ದ ದಿನಸಿ, ಟಿವಿ, ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಗೃಹ ಉಪಯೋಗಿ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಮನೆ ಮಾಲೀಕರರು ಇಲೆಕ್ಟ್ರಿಕ್ ಕೆಲಸ ಮಾಡುತ್ತಾರೆ ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದ ಕಾರಣ ಬಾರಿ ಅನಾಹುತ ತಪ್ಪಿದೆ. ಇಮ್ರಾನ್ ಅತ್ತಾರ, ಡಿ ಆರ್ ಖಾಜಿ, ಸಲೀಮ ಬಾಗವಾನ, ಮಹಮ್ಮದ ಮುಜಾವರ, ಮೌಲಾ ಕಳಾವಂತ ಮೊದಲಾದವರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಶ್ರಮಿಸಿದರು.





