ತಾಲೂಕಿನ ಬೆಲ್ಲದ ಬಾಗೇವಾಡಿಯ ಭರತೇಶ ವಿದ್ಯಾ ಸಂಸ್ಥೆಯ ಸಿ.ಬಿ.ಎಸ್.ಇ ಶಾಲೆಗೆ ಪ್ರಥಮ ರ‍್ಯಾಂಕ ಪಡೆದ ಸಿಂಚನಾ ಚರಾಟಿ.
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ಭರತೇಶ ವಿದ್ಯಾ ಸಂಸ್ಥೆಯ ಧನಪಾಲ ಖೇಮಲಾಪೂರೆ ಸಿ.ಬಿ.ಎಸ್.ಇ ಶಾಲೆ 10 ನೇ ತರಗತಿ ವಿದ್ಯಾರ್ಥಿನಿ 2024-25ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಸಿಂಚನಾ ಸಂತೋಷ ಚರಾಟಿ ಶೇ.90.2 ರಷ್ಟು ಅಂಕ ಪಡೆದು ಶಾಲೆಗೆ ಪ್ರಥಮ ರ‍್ಯಾಂಕ್ ಪಡೆದಿರುವಳು.
ಭರತೇಶ ವಿದ್ಯಾ ಸಂಸ್ಥೆ ಸಿ.ಬಿ.ಎಸ್.ಇ ಶಾಲೆಯ ೫ ವರ್ಷದ ಫಲಿತಾಂಶದಲ್ಲಿ ಮೊದಲ ಬಾರಿ ಇಷ್ಟು ಅಂಕ ಗಳಿಸಿದ ಹೆಗ್ಗಳಿಕೆ ಇವಳದ್ದಾಗಿದೆ. ವಿದ್ಯಾರ್ಥಿನಿಯ ಸಾಧನೆಗೆ ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ ಅಧ್ಯಕ್ಷ ಪವನ ಕತ್ತಿ, ಸತೀಶ ಜಾಗನೂರ, ವಿನೋದ ರಾಮದುರ್ಗ, ಸತೀಶ ಚರಾಟಿ, ವಿನಾಯಕ ಶೆಟ್ಟಿ, ಚೇತನ ಕತ್ತಿ ಮತ್ತು ವಿದ್ಯಾ ಸಂಸ್ಥೆಯ ಪದಾಧಿಕಾರಿಗಳು, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ನಿವೃತ್ತ ಪ್ರೋ. ರಾಜಶೇಖರ ಇಚ್ಚಂಗಿ ಅವರ ಪುತ್ರ ವಿಜಯಪುರ ಸೈನಿಕ ಶಾಲೆಯಲ್ಲಿ ಓದುತ್ತಿದ್ದ ಪ್ರಸಾದ ಇಚ್ಚಂಗಿ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ.89.4 ಅಂಕಗಳಿಸಿ ಸಾಧನೆ ಮಾಡಿದ್ದಾನೆ.