ಭಾವೈಕ್ಯತೆಯ ಧ್ಯೋತಕ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದ ಶ್ರೀ ಕಾಡಸಿದ್ದೇಶ್ವರರ ಪುಣ್ಯಕ್ಷೇತ್ರ.

ಭಾರತದ ಇತಿಹಾಸದಲ್ಲಿ ಅನೇಕ ಮಹಾಪುರುಷರು, ಸಂತರು, ಋಷಿ ಮುನಿಗಳಿಗೆ ಜನ್ಮನೀಡಿದ ಪುಣ್ಯಭೂಮಿ. ಇಂತಹ ಶರಣ ಸಂಪ್ರದಾಯಕ್ಕೆ ಸೇರಿದ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದೇವರಾದ ಜಗದ್ಗುರು ಶ್ರೀ ಕಾಡಸಿದ್ದೇಶ್ವರ ಮಹಿಮೆ ಅಪಾರ.

ಚರಿತ್ರೆಯನ್ನು ಅವಲೋಕಿಸಿದಾಗ ಏಳನೆಯ ಶತಮಾನದಲ್ಲಿ ಪರಮಾತ್ಮನ ಅವತಾರವೆರತ್ತಿದ ಮಹಾಸತ್ತಪುರುಷರು ತಮ್ಮ ಜೀವಿತಾವದಿಯಲ್ಲಿ ಜೀವರಾಶಿಗೆ ಭಕ್ತಿ, ಜ್ಞಾನ, ವೈರಾಗ್ಯ ಭೋದಿಸಿ. ಸಮಾಜದಲ್ಲಿನ ಮೂಢನಂಬಿಕೆ, ಢಂಬಾಚಾರಗಳನ್ನು ತ್ಯಜಿಸಿ, ಭಕ್ತಸಮೂಹಕ್ಕೆ ಧರ್ಮೊಪದ್ದೇಶ ಉಣಬಡಿಸಿದರು. ಶ್ರೀ ಕಾಡಸಿದ್ದೇಶ್ವರರು ಅಥಣಿ ತಾಲೂಕಿನ ಗುಂಡವಾಡಿ ಗ್ರಾಮದ ಗೌಡರ ಮನೆತನದಲ್ಲಿ ಜನಿಸಿದ್ದರೆಂದು ಪ್ರತೀತಿ ಇದೆ. ಕಠಿಣ ಪೂಜಾವೃತ ತಪಸ್ಸಿನಿಂದ ಜ್ಞಾನ ಶಕ್ತಿ ಸಂಪಾದಿಸಿದರು. ಕರ್ನಾಟಕ ಮಹಾರಾಷ್ಟ್ರದಿಂದ ಸಂಚರಿಸಿ ಧರ್ಮಪ್ರಚಾರ ಗೈಯುತ್ತಾ ಸುಮಾರು ಇನ್ನೂರಕ್ಕೂ ಹೆಚ್ಚು ಮಠಗಳನ್ನು ಸ್ಥಾಪಿಸಿದ್ದಾರೆ.

ಗೋಕಾಕ ತಾಲೂಕಿನ ಕೊಣ್ಣೂರಮಠದಿಂದ ಪಾದಯಾತ್ರೆ ಮಾಡುತ್ತಾ ಬಡಕುಂದ್ರಿ ಸಮೀಪದ ಹಿರಣ್ಯಕೇಶಿ ನದಿಯ ಹತ್ತಿರ ಬಂದಾಗ ನದಿ ಮಹಾಪೂರದಿಂದ ತುಂಬಿ ಹರಿಯುತ್ತಿತು. ನಾವಿಕರು ಶ್ರೀಗಳನ್ನು ನದಿ ದಾಟಿಸಿ ಬಸ್ತವಾಡ ಗ್ರಾಮಕ್ಕೆ ತಲುಪಿಸಲು ನಿರಾಕರಿಸಿದಾಗ ಶ್ರೀ ಕಾಡಸಿದ್ದೇಶ್ವರರು ಭಗವಂತನನ್ನು ಮನದಲ್ಲಿ ಪ್ರಾರ್ಥಿಸಿ ತಮ್ಮ ಮೈಮೇಲೆಯಿದ್ದ ಕಂಬಳಿಯನ್ನು ನೀರಿನ ಮೇಲೆ ಹಾಯಿಸಿ ಕುಳಿತರು ಕಂಬಳಿಯೂ ನೀರಿನ ಮೇಲೆ ಅತಿವೇಗದಿಂದ ತೆಲುತ್ತಾ ಬಸ್ತವಾಡ ಗ್ರಾಮದ ದಡ ತಲುಪಿಸಿತು. ಇಂತಹ ವಿಸ್ಮಯ ಶಕ್ತಿಯನ್ನು ಕಂಡ ಎರಡು ಗ್ರಾಮಗಳ ನದಿ ದಂಡೆಯ ಜನರು ಆಶ್ಚರ್ಯದಿಂದ ಭಕ್ತಿಪರವಶರಾಗಿ ಕೈಮುಗಿದು ನಿಂತರು. ಶ್ರೀ ಕಾಡಸಿದ್ದೇಶ್ವರರು ಸಾಮಾನ್ಯ ಮನುಷ್ಯರಲ್ಲ. ದೈವಸ್ವರೊಪಿ ಶಿವನ ಅವತಾರವೆಂದು ಕೊಂಡಾಡಿದರು ಎಂದು ಭಕ್ತರು ಹೇಳುವರು.

ಶ್ರೀ ಕಾಡಸಿದ್ದೇಶ್ವರ ಸೇವೆ ಮಾಡಿದ ಹಿಂದೂ, ಜೈನ್, ಮುಸ್ಲಿಂ ಧರ್ಮದ ಭಕ್ತರು ಗ್ರಾಮದ ಮಧ್ಯಭಾಗದಲ್ಲಿ ನೆಲೆನಿಂತಿರುವ ಗದ್ದುಗೆಯ ಪವಿತ್ರ ಸ್ಥಳದಲ್ಲಿ ಭವ್ಯವಾದ ದೇವಸ್ಥಾನ ನಿರ್ಮಿಸಿ, ಭಕ್ತಿ ಭಾವೈಕ್ಯತೆಯನ್ನು ಬಿಂಬಿಸಿದ್ದಾರೆ.
1998ರಲ್ಲಿ ಲಿಂಗಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮಾಡಿದರು. ಕೈತೋಟ, ಪತ್ರಿಬನ, ಹುಣಸೆಮರಗಳ ಮಧ್ಯೆ ಪ್ರಶಾಂತವಾದ ದೇವಸ್ಥಾನದ ಆವರಣದಲ್ಲಿ ದ್ವೀಪಸ್ತಂಭ, ಸಾಂಸ್ಕೃತಿಕಭವನ, ಪ್ರಸಾದ ನಿಲಯ, ಶ್ರೀ ಪವಾಡಸಿದ್ದೇಶ್ವರ ಮಂದಿರ, ಶ್ರೀ ಗಣೇಶ ಮಂದಿರ ಹಾಗೂ ಕಲ್ಯಾಣ ಮಂಟಪ ಕಟ್ಟಿಸಲಾಗಿದೆ.

ಕರ್ನಾಟಕ, ಮಹಾರಾಷ್ಟ್ರದಿಂದ ಸಾವಿರಾರು ಜನ ಭಕ್ತರು ಪ್ರತಿ ಸೋಮವಾರ ಮತ್ತು ಗುರುವಾರ ದೇವಸ್ಥಾನಕ್ಕೆ ಆಗಮಿಸಿ ಇಷ್ಠಾರ್ಥಸಿದ್ದಿಗಾಗಿ ಪೂಜೆ ಸಲ್ಲಿಸುವರು. ದೇವರ ಅಂಬಲಿ ಪ್ರಸಾದ ಸ್ವೀಕರಿಸಿ ಪುಣಿತರಾಗುವರು. ಶ್ರೀ ಕಾಡಸಿದ್ದೇಶ್ವರರು ಭಕ್ತರ ಮನೆದೇವರಾಗಿದ್ದರೆ ಮದುವೆ ಕಾರ್ಯಕ್ಕಿಂತ ಮುಂಚೆ ಅಗ್ಗಿ ಹಾಯುವ ವಾಡಿಕೆ ಇದೆ. ಸರ್ವಧರ್ಮಿಯರ ಆರಾಧ್ಯದೈವರಾದ ಶ್ರೀ ಕಾಡಸಿದ್ದೇಶ್ವರರಿಗೆ ಕವಲು ಹಚ್ಚುವದು, ರುದ್ರಾಭೀಷೇಕ, ವಿಶೇಷ ಪೂಜೆ, ದಂಡವತ್ತ ಹಾಕುವದು, ಗುಗ್ಗುಳೋತ್ಸವದ ಮಾಡಿಸುವರು ನಡೆದು ಬಂದ ಸಂಪ್ರದಾಯ.ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದ ಜೀರ್ನೋದ್ಧಾರಕ್ಕೆ ಕಮೀಟಿಯವರು ಹಗಲಿರುಳು ಜಾತ್ರಾ ಮಹೋತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

ಹುಕ್ಕೇರಿ ತಾಲೂಕು ಬಸ್ತವಾಡ ಗ್ರಾಮದೇವರಾದ ಶ್ರೀ ಕಾಡಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ (ಯುಗಾದಿ ಅಮವಾಸ್ಯೆಯಿಂದ) ಶನಿವಾರ ಮಾ.29ರಿಂದ ಬುಧವಾರ ಎ.2ರವರೆಗೆ 5 ದಿನಗಳ ಕಾಲ ಸಂಭ್ರಮದಿಂದ ಜರುಗಲಿದೆ.

Leave a Reply

Your email address will not be published. Required fields are marked *

error: Content is protected !!