ಬೆಲ್ಲದ ಬಾಗೇವಾಡಿಯ ಕೃಷಿ ಸೇವಾ ಸಹಕಾರಿಗೆ 3.56 ಕೋಟಿ ರೂ ಲಾಭ: ಪೃಥ್ವಿ ಕತ್ತಿ

PKPS Bellad Bagewadi

ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಕೃಷಿ ಸೇವಾ ಸಹಕಾರಿ ಸಂಘದಲ್ಲಿ ಸುದ್ದಿಗಾರರೊಂದಿಗೆ ಪೃಥ್ವಿ ಕತ್ತಿ ಮಾತನಾಡಿದರು.ಶ್ರೀಕಾಂತ ಖೇಮಲಾಪೂರೆ, ಅಶೋಕ ಬೆಲ್ಲದ, ಮುರಗೇಶ ಮಾಳಗಿ ಮತ್ತಿತರರಿದ್ದರು.

120 ವರ್ಷಗಳ ಹಿಂದೆ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಸ್ಥಾಪಿತವಾದ ಮೊದಲ ಕೃಷಿ ಸೇವಾ ಸಹಕಾರಿ ರೈತರ ಸಹಕಾರದಿಂದ ಹೆಮ್ಮರವಾಗಿ ಬೆಳೆಯುವುದರ ಜತೆಗೆ ವಾರದ ಏಳು ದಿನ ಕಾರ್ಯ ನಿರ್ವಹಿಸುವ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಹಕಾರಿ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ೩.೫೬ ಕೋಟಿ ರೂ ನಿವ್ಹಳ ಲಾಭ ಗಳಿಸಿದೆ ಎಂದು ಉದ್ಯಮಿ ಪೃಥ್ವಿ ಕತ್ತಿ ಹೇಳಿದರು.

ಸಹಕಾರಿಯ ಪ್ರಧಾನ ಕಚೇರಿಯಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇವಾ ಸಹಕಾರಿ ಸಂಘ ರಸಗೊಬ್ಬರ ಮತ್ತು ಕೀಟನಾಶಕ ಮತ್ತು ಬೀಜಗಳ ಮಾರಾಟ ಮಾಡಿ 2.02ಕೋಟಿ ರೂ ಲಾಭ ಗಳಿಸಿದೆ.ಇದರ ಜತೆಗೆ ಇತರ ವ್ಯವಹಾರಗಳಿಂದ ಉಳಿದ ಲಾಭ ಆಗಿದೆ ಎಂದರು.ಸಹಕಾರಿ ಸದಸ್ಯರಿಗೆ ರಸಗೊಬ್ಬರ ಖರೀದಿಗೆ ಶೇ.8% ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದರ ಜತೆಗೆ ಕಡಿಮೆ ಶುಲ್ಕದಲ್ಲಿ ರೈತರ ಮನೆ ಬಾಗಿಲಿಗೆ ರಸಗೊಬ್ಬರಗಳ ಸಾಗಾಟ ಮಾಡುತ್ತಿದ್ದೇವೆ.ಒಟ್ಟಾರೆ ರೈತ ಸ್ನೇಹಿ ಸಹಕಾರಿ ಇದಾಗಿದೆ ಎಂದರು. ಸಿಬ್ಬಂದಿಗಳಿಗೆ ೮ನೇ ವೇತನ ಶ್ರೇಣಿ ನೀಡುತ್ತಿರುವ ಮೊದಲ ಸಹಕಾರಿ ಇದಾಗಿದೆ ಎಂದು ತಿಳಿಸಿದರು.

ಪ್ರಧಾನ ವ್ಯವಸ್ಥಾಪಕ ರವೀಂದ್ರ ಕತ್ತಿ ಮಾತನಾಡಿ ಮಾಜಿ ಸಂಸದ ರಮೇಶ ಕತ್ತಿ ಈ ಸಹಕಾರಿ ನಿರ್ದೇಶಕರಾಗಿದ್ದು ಅವರ ಮರ್ಗದರ್ಶನದಲ್ಲಿ ಸಹಕಾರಿಯು 6.63 ಕೋಟಿ ರೂ ಠೇವಣಿ ಸಂಗ್ರಹಿಸಿ, 2.34 ಕೋಟಿ ರೂ ಸಾಲ ವಿತರಿಸಿದ್ದು, ಶೇ.1೦೦% ರಷ್ಟು ಸಾಲ ವಸೂಲಾತಿ ಮಾಡಲಾಗಿದೆ ಎಂದರು. 114 ಕೋಟಿ 71 ಲಕ್ಷ ರೂ ದುಡಿಯುವ ಬಂಡವಾಳ ಹೊಂದಿರುವ ಸಹಕಾರಿ ಇದಾಗಿದೆ. 120 ವರ್ಷಗಳ ಸುದೀರ್ಘ ಅವಧಿಯಲ್ಲಿ ಆಡಳಿತ ಮಂಡಳಿಗೆ ಚುನಾವಣೆ ನಡೆಸದೇ ಅವಿರೋಧ ಆಯ್ಕೆ ಜರುಗುತ್ತಿದೆ ಎಂದರು.

ಸಹಕಾರಿ ಅಧ್ಯಕ್ಷ ಶ್ರೀಕಾಂತ ಖೇಮಲಾಪೂರೆ, ಉಪಾಧ್ಯಕ್ಷ ಅಶೋಕ ಬೆಲ್ಲದ ನಿರ್ದೇಶಕರಾದ ಮುರಗೇಶ ಮಾಳಗಿ, ಭರಮಪ್ಪಾ ಮುನ್ನೋಳಿ, ನಾಸೀರ ಜಗದಾಳ, ಆರ್.ಎಸ್.ಪರೀಟ ಇತರರಿದ್ದರು.ಭರತೇಶ ಉಪಾಧ್ಯೆ ಸ್ವಾಗತಿಸಿದರು.ಮಲ್ಲಿಕಾರ್ಜುನ ಬೆಲ್ಲದ ವಂದಿಸಿದರು

ಜಿಲ್ಲೆಯ ಕೃಷಿ ಸಹಕಾರಿ ಸಂಘಗಳಲ್ಲಿ ಸಿಬ್ಬಂದಿಗಳಿಗೆ 8ನೇ ವೇತನ ಶ್ರೇಣಿ ನೀಡುತ್ತಿರುವ ಮೊದಲ ಸಹಕಾರಿ ಇದಾಗಿದೆ: ಪೃಥ್ವಿ ಕತ್ತಿ

Leave a Reply

Your email address will not be published. Required fields are marked *

error: Content is protected !!