ರಾಮದುರ್ಗ ತಾಲೂಕಿನ ಬನ್ನೂರು ಚಿಕ್ಕಮಠದಲ್ಲಿ ಬನ್ನೂರಿನ ಸಿದ್ದಲಿಂಗ ಶಿವಾಚಾರ್ಯರಿಗೆ ಪಂಚಾಚಾರ್ಯ ಶ್ರೀ ಪ್ರಶಸ್ತಿ ಗೌರವಿಸಿದರು. ವೀರಭದ್ರ ಶಿವಾಚಾರ್ಯರು, ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯರು ಇತರರಿದ್ದರು..
ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವದ ಸವಿ ನೆನವಿನಲ್ಲಿ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಿಂದ ನೀಡುತ್ತಿರುವ ಪಂಚಾಚಾರ್ಯ ಶ್ರೀ ಪ್ರಶಸ್ತಿ ಈ ವರ್ಷ ಬನ್ನೂರು ಚಿಕ್ಕಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ ದೊರಕಿದೆ.
ರವಿವಾರ ಯುಗಾದಿ ದಿನದಂದು ರಾಮದುರ್ಗ ತಾಲೂಕಿನ ಬನ್ನೂರು ಚಿಕ್ಕಮಠದಲ್ಲಿ ಬನ್ನೂರಿನ ಸಿದ್ದಲಿಂಗ ಶಿವಾಚಾರ್ಯರಿಗೆ ಪಂಚಾಚಾರ್ಯ ಶ್ರೀ ಪ್ರಶಸ್ತಿ ಗೌರವಿಸಿ ಮಾತನಾಡಿದ ಕಟಕೋಳ ಎಂ.ಚಂದರಗಿ ಹಿರೇಮಠದ ವೀರಭದ್ರ ಶಿವಯೋಗಿ ಶಿವಾಚಾರ್ಯರು ಒಬ್ಬ ಸಾತ್ವಿಕ, ತಾತ್ವಿಕ ಮತ್ತು ಆಚಾರವಂತ ಸ್ವಾಮೀಜಿಗಳಿಗೆ ನೀಡುವುದರ ಮೂಲಕ ಹುಕ್ಕೇರಿ ಶ್ರೀಗಳು ಹಿರಿತನಕ್ಕೆ ಕೊಟ್ಟ ಗೌರವಿಸಿದ್ದಾರೆಂದರು. ಹುಕ್ಕೇರಿ ಶ್ರೀಗಳು ಪ್ರತಿವರ್ಷ ಪಂಚಾಚಾರ್ಯ ಪ್ರಶಸ್ತಿಯನ್ನು ಹಿರಿಯ ಸ್ವಾಮೀಜಿಗಳಿಗೆ ನೀಡುತ್ತ ಬರುತ್ತಿರುವುದು ಸಂತಸದ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾಗೋಜಿಕೊಪ್ಪ, ಹಿರೇಮಠದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯರು ಮಾತನಾಡಿ ಹಿರಿಯರು ಇದ್ದಲ್ಲಿಯೇ ಹೋಗಿ ಗೌರವಿಸುವಂತಹ ಸಂಪ್ರದಾಯವನ್ನು ಹುಕ್ಕೇರಿ ಹಿರೇಮಠ ಹಾಕಿರುವುದು ದೇಶದ ಮೊದಲ ಮಠ ಎಂದರು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಬನ್ನೂರು ಚಿಕ್ಕಮಠ ಸಿದ್ದಲಿಂಗ ಶಿವಾಚಾರ್ಯರು ಹುಕ್ಕೇರಿ ಶ್ರೀಗಳು ಪಂಚಪೀಠದ ಸೇನಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕೊಟ್ಟಿರುವ ಈ ಪ್ರಶಸ್ತಿ ನಮ್ಮ ಭಕ್ತರಿಗೆ ಸಲ್ಲುತ್ತದೆ ಎಂದರು. ಪಂಚಾಚಾರ್ಯ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಯುಗಾದಿಯ ಪಾಡ್ಯದಂದು ಎಲ್ಲರೂ ತಮ್ಮ ಮನೆ, ಮಠಗಳಲ್ಲಿ ಪಂಚಾಚಾರ್ಯ ಯುಗಮಾನೋತ್ಸವದ ದಿನವನ್ನಾಗಿ ಆಚರಿಸಬೇಕು. ಭಾರತೀಯ ಪರಂಪರೆಯಲ್ಲಿ ಪಂಚಪೀಠಗಳು ತುಂಬಾ ಪುರಾತನವಾದವು ಎಂದರು.
ಕಟಕೋಳ ಎಂ.ಚಂದರಗಿಯ ಉತ್ತರಾಧಿಕಾರಿ ರೇಣುಕ ಗಡದೇಶ್ವರ ದೇವರು.ಹುಕ್ಕೇರಿ ಹಿರೇಮಠದ ಗುರುಕುಲದ ಕಾರ್ತಿಕ ಶಾಸ್ತ್ರಿಗಳು, ಮಲ್ಲಿಕಾರ್ಜುನ ಶಾಸ್ತ್ರಿಗಳು, ಕಾವೇರಿ ರೋಗಿ, ಮಹಾಂತೇಶ ವಾಲಿ, ಸುರೇಶ ಹಿರೇಮಠ, ಲೋಕಾಪುರೆ ಮತ್ತಿತರಿದ್ದರು. ಮಹಾಂತೇಶ ವಾಲಿ ನಿರೂಪಿಸಿ ವಂದಿಸಿದರು.