ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲೂಕಿನ ನಾಗರಬೆಟ್ಟದಲ್ಲಿ ಹುಕ್ಕೇರಿಯ ಎಸ್.ಕೆ.ಪಬ್ಲಿಕ್ ಶಾಲೆ ವಿದ್ಯಾರ್ಥಿನಿ “ಜೀನಿಯಸ್ ಆಕ್ಸಫರ್ಡ 2025” ಪುರಸ್ಕಾರ ಪಡೆದಳು.
ಹುಕ್ಕೇರಿ ಪಟ್ಟಣದ ಎಸ್.ಕೆ.ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಅಶ್ವಿನಿ ಬಡಮಲ್ಲನವರ ಮುದ್ದೆಬಿಹಾಳ ತಾಲೂಕಿನ ನಾಗರಬೆಟ್ಟದ ಆಕ್ಸಫರ್ಡ ಪಾಟೀಲ ಸಮೂಹ ಶಿಕ್ಷಣ ಸಂಸ್ಥೆಯವರು ಆಯೋಜಿಸಿದ್ದ “ಜೀನಿಯಸ್ ಆಕ್ಸಫರ್ಡ 2025” ಸ್ಪರ್ಧಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು 75ಸಾವಿರ ರೂ ನಗದು ಸಹಿತ ಟ್ರೋಫಿ ಪುರಸ್ಕಾರ ಪಡೆದಳು.
ಇತ್ತೀಚೆಗೆ ನಡೆದ ಜೀನಿಯಸ್ ಆಕ್ಸಫರ್ಡ 2025ರ ಸ್ಪರ್ಧಾ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಹುಕ್ಕೇರಿ ತಾಲೂಕಿನ ಬೆನಿವಾಡ ಗ್ರಾಮದ ಅಶ್ವಿನಿ ಬಡಮಲ್ಲನವರ ಶೇ 73.08 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಈ ಪುರಸ್ಕಾರಕ್ಕೆ ಭಾಜನ ಆದಳು.

ಇವಳ ಈ ಪುರಸ್ಕಾರದಿಂದ ಹುಕ್ಕೇರಿ ತಾಲೂಕಿನ ಮತ್ತು ನಮ್ಮ ಶಾಲೆಯ ಕೀರ್ತಿ ಹೆಚ್ಚಿಸಿದ್ದಾಳೆಂದು ಎಸ್.ಕೆ ಪಬ್ಲಿಕ್ ಶಾಲೆ ಚೇರಮನ್ ಪಿಂಟು ಶೆಟ್ಟಿ ತಿಳಿಸಿದರು.