ಹುಕ್ಕೇರಿಯಲ್ಲಿ ಸಂವಿಧಾನ ಶಿಲ್ಪಿಯ ಅದ್ಧೂರಿ ಜಯಂತಿ

ಪಟ್ಟಣದ ಹಳೇ ತಹಸೀಲ್ದಾರರ ಕಾರ್ಯಾಲಯದ ಬಳಿ ನಡೆದ ಕಾರ್ಯಕ್ರಮದಲ್ಲಿ ತಹಸೀಲ್ದಾರ ಮಂಜುಳಾ ನಾಯಕ ಮತ್ತು ಮುಖಂಡರು ಡಾ.ಬಿ.ಆರ್.ಅಂಬೇಡ್ಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಹುಕ್ಕೇರಿ : ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರರ ೧೩೪ನೇ ಜಯಂತಿಯನ್ನು ತಾಲೂಕಾಡಳಿತದಿಂದ ಅದ್ದೂರಿಯಾಗಿ ಆಚರಿಸಲಾಯಿತು. ಸೋಮವಾರದಂದು ಪಟ್ಟಣದ ಹಳೇ ತಹಸೀಲ್ದಾರರ ಕಾರ್ಯಾಲಯದ ಬಳಿ ನಡೆದ ಕಾರ್ಯಕ್ರಮದಲ್ಲಿ ತಹಸೀಲ್ದಾರ ಮಂಜುಳಾ ನಾಯಕ ಮತ್ತು ಮುಖಂಡರು ಡಾ.ಬಿ.ಆರ್.ಅಂಬೇಡ್ಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಪ್ರಾರಂಭದಲ್ಲಿ ಸ್ಥಳೀಯ ಅಡವಿಸಿದ್ದೇಶ್ವರ ಮಠದ ಬಳಿ ಡಾ.ಬಾಬಾಸಾಹೇಬ ಅಂಬೇಡ್ಕರರ ಭಾವಚಿತ್ರದ ಮೆರವಣಿಗೆಗೆ ತಹಶೀಲ್ದಾರ ಮಂಜುಳಾ ನಾಯಕ ಚಾಲನೆ ನೀಡಿ ಮಾತನಾಡುತ್ತಾ ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ಖ್ಯಾತ ರ‍್ಥ ಶಾಸ್ತçಜ್ಞರು, ಸಮಾಜ ಸುಧಾರಕರು ಹಾಗೂ ಸಮಾಜದಲ್ಲಿ ರ‍್ವರಿಗೂ ಸಮಾನತೆ ತರಲು ಅವರು ನೀಡಿದ ಸಂವಿಧಾನದ ಕೊಡುಗೆ ಜಗತ್ ಪ್ರಸಿದ್ದವಾದ ಪ್ರಜಾಪ್ರಭುತ್ವಕ್ಕೆ ಬುನಾದಿ ಆಗಿದೆ ಎಂದರು.

ಮುಖಂಡ ಉದಯ ಹುಕ್ಕೇರಿ ಮಾತನಾಡಿ ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಎಲ್ಲರಿಗೂ ಬದುಕುವ ಹಕ್ಕು ನೀಡಿದ ಮಹಾನ್ ನಾಯಕ ಎಂಬ ಮಾತು ಡಾ.ಬಾಬಾಸಾಹೇಬ ಅಂಬೇಡ್ಕರ ಅವರಿಗೆ ಸಲ್ಲುತ್ತದೆ ಎಂದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನರ‍್ದೇಶಕ ಎಚ್.ಎ.ಮಾಹುತ ಮಾತನಾಡಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.

ಪುರಸಭೆ ಅಧ್ಯಕ್ಷ ಇಮ್ರಾನ ಮೋಮಿನ, ಸರಕಾರಿ ನೌಕರರ ಸಂಘಟನೆ ತಾಲೂಕಾಧ್ಯಕ್ಷ ಅವಿನಾಶ ಹೊಳೆಪ್ಪಗೋಳ, ಮುಖಂಡರಾದ ಮಲ್ಲಿಕಾರ್ಜುನ ರಾಶಿಂಗೆ, ರಮೇಶ ಹುಂಜಿ, ಪ್ರಕಾಶ ಮೈಲಾಖೆ. ಬಿ.ಕೆ.ಸದಾಶಿವ, ಬಸವರಾಜ ತಳವಾರ, ಕೆಂಪಣ್ಣಾ ಶಿರಹಟ್ಟಿ, ಅಧಿಕಾರಿಗಳಾದ ಪ್ರಭಾವತಿ ಪಾಟೀಲ, ಸವಿತಾ ಹಲಕಿ, ಎ.ಎಸ್.ಪದ್ಮನ್ನವರ, ಎಚ್.ಹೊಳೆಪ್ಪ, ಡಾ.ಉದಯ ಕುಡಚಿ, ಈಶ್ವರ ಸಿದ್ನಾಳ, ಡಾ.ರಮೇಶ ಕದಮ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!