ಪಟ್ಟಣದ ಬಸವ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು. ಜ್ಯೋತಿಬಾ ದುಪ್ಪಟ್ಟಿ, ಪ್ರಭಾಕರ ತುಬಚಿ, ಸುಹಾಸ ನೂಲಿ, ರಾಜು ಕುರಂದವಾಡೆ ಇತರರಿದ್ದರು.
ಹುಕ್ಕೇರಿ : ಭಾರತೀಯ ಯೋಧರು ತಡರಾತ್ರಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ೧೦೦ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿದ್ದಕ್ಕೆ ಹುಕ್ಕೇರಿ ಪಟ್ಟಣದಲ್ಲಿ ಯುವಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಬುಧವಾರದಂದು ಬಸವ ವೃತ್ತದಲ್ಲಿ ಸಂಭ್ರಮಾಚರಣೆ ನಡೆಸಿದ ಬಳಿಕ ಮಾತನಾಡಿದ ಯುವ ಧುರೀಣ ಸುಹಾಸ ನೂಲಿ, ಅಪ್ಪುಸ ತುಬಚಿ, ಮುಧುಕರ ಕರನಿಂಗ ಮತ್ತು ರಾಜು ಮುನ್ನೋಳಿ ಮಾತನಾಡಿ ಇತ್ತೀಚೆಗೆ ಜಮ್ಮು ಕಾಶ್ಮೀರದ ಪಹಲ್ಗಾಮ್‌ಕ್ಕೆ ತೆರಳಿದ್ದ ಪ್ರವಾಸಿಗರನ್ನು ಧರ್ಮ ಕೇಳಿ ಕೇಳಿ ಕೊಂದು ಹಾಕಿದ್ದ ಪಾಕಿಸ್ತಾನ ಉಗ್ರರಿಗೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ ಎಂದರು.ಈ ಕ್ರಮ ಇಷ್ಟಕ್ಕೆ ಸೀಮಿತವಾಗದೇ ಉಗ್ರರನ್ನು ಸಂಪೂರ್ಣ ಸದೆ ಬಡೆಯುವವರೆಗೆ ಹೋರಾಟ ಮುಂದುವರೆಯಲಿ. ಭಾರತೀಯರೆಲ್ಲ ಕೇಂದ್ರ ಸರಕಾರ ಹಾಗೂ ಯೋಧರಿಗೆ ಸಂಪೂರ್ಣ ಬೆಂಬಲಿಸುತ್ತದೆ ಎಂದರು.
ಜ್ಯೋತಿಬಾ ದುಪ್ಪಟ್ಟಿ, ಪ್ರಭಾಕರ ತುಬಚಿ, ಸುಹಾಸ ನೂಲಿ, ರಾಜು ಮುನ್ನೋಳಿ, ಮಧುಕರ್ ಕರನಿಂಗ, ರಮೇಶ ಬೋಳಗಾಂವಿ, ಪ್ರಭಾಕರ ಹಂಚಿನಾಳ, ಮಹಾದೇವ ಪರೀಟ, ರಾಜು ಕುರಂದವಾಡಿ, ಶಂಕರ ಪಟ್ಟಣಶೆಟ್ಟಿ, ಶಂಭು ಪೂಜೇರಿ, ಅಜಯ ಕೇಸರಕರ, ಋತಿಕ ಬೆನ್ನಾಡಿಕರ, ಅಕ್ಷಂiÀi ಬೆನ್ನಾಡಿಕರ, ಶಿವರಾಜ ಅಂಬಾರಿ ಸೇರಿದಂತೆ ಅನೇಕರಿದ್ದರು.
ದಾಳಿಯನ್ನು ಖಂಡಿಸುವುದು, ಮಂಡಿಸುವುದು ಆಗುವುದು ಬೇಡ ದಂಡಿಸುವ ಕೆಲಸವಾಗಬೇಕಾಗಿತ್ತು.ಇದೀಗ ನಮ್ಮ ಹೆಮ್ಮೆಯ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ ಎಂದು ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಸಂತಸ ವ್ಯಕ್ತಪಡಿಸಿದ್ದಾರೆ.