ಶಕುಂತಲಾ ರಾಮದುರ್ಗ, ಪ್ರಿಯಂಕಾ ವಿನಾಯಕ ಶೆಟ್ಟಿ, ಶೋಭಾ ರಾಮದುರ್ಗ, ಬೆಲ್ಲದ, ಕುಲಕರ್ಣಿ ಕುಟುಂಬದವರು ಮತ್ತು ಗ್ರಾಮದ ಹಿರಿಯರು ಪಾಲ್ಗೊಂಡಿದ್ದರು.
ಹುಕ್ಕೇರಿ: ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಶ್ರದ್ಧಾಭಕ್ತಿಯೊಂದಿಗೆ ಅದ್ದೂರಿಯಾಗಿ ಹನುಮ ಜಯಂತಿ ಆಚರಿಸಲಾಯಿತು.
ಗ್ರಾಮದ ಹನುಮ ಮಂದಿರದಲ್ಲಿ ಮಹಿಳೆಯರು ಬಾಲ ಹನುಮನನ್ನ ತೊಟ್ಟಿಲಿಗೆ ಹಾಕಿ ನಾಮಕರಣ ಮಾಡಿ ಸಂಭ್ರಮಿಸಿದರು. ಈ ವೇಳೆ ಲಕ್ಷ್ಮಣ ರಾಮದುರ್ಗ ಕುಟುಂಬಸ್ಥರು ಹನುಮನಿಗೆ ಮಹಾಭಿಷೇಕ ನೆರವೇರಿಸಿದರು.
ದೇವಸ್ಥಾನದಲ್ಲಿ ಹನುಮನಿಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಪೂರ್ವಕವಾಗಿ ಜರುಗಿದವು. ನೂರಾರು ಮಹಿಳೆಯರು ಹನುಮನ ನಾಮಸ್ಮರಣೆ ಮಾಡುವ ಮೂಲಕ ಭಕ್ತಿಯಲ್ಲಿ ಮಿಂದೆದ್ದು ಅರ್ಥಪೂರ್ಣವಾಗಿ ಹನುಮ ಜಯಂತಿಯನ್ನ ಆಚರಿಸಲಾಯಿತು. ಇದಕ್ಕೂ ಮೊದಲು ಗ್ರಾಮದಲ್ಲಿ ವಿವಿಧ ವಾಧ್ಯಮೇಳಗಳೊಂದಿಗೆ ಮಹಿಳೆಯರಿಂದ ಕುಂಭಮೇಳ ಮೆರವಣಿಗೆ ಸಡಗರ ಸಂಭ್ರಮದಿಂದ ನಡೆಯಿತು.