ಹುಕ್ಕೇರಿ ತಾಲೂಕಿನ ಹುಲ್ಲೋಳಿ ಗ್ರಾಮದ ಅರಿಹಂತ ಸೌಹಾರ್ದ ಸಹಕಾರಿಯ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಪ್ರಧಾನ ವ್ಯವಸ್ಥಾಪಕ ಆನಂದ ಚೌಗಲಾ ಮಾತನಾಡಿದರು.ಬಿ.ಬಿ.ಚೌಗಲಾ, ಬಾಹುಬಲಿ ನಾಗನೂರಿ, ರಾಮಣ್ಣಾ ಗೋಟೂರಿ, ಮಹಾವೀರ ಚೌಗಲಾ ಇತರರಿದ್ದರು.
ಗ್ರಾಮೀಣ ಭಾಗದ ಜನರ ಆರ್ಥಿಕ ಚೇತನಕ್ಕೆ ೨೫ ವರ್ಷಗಳ ಹಿಂದೆ ಪ್ರಾರಂಭಿಸಲಾದ ತಾಲೂಕಿನ ಹುಲ್ಲೋಳಿ ಅರಿಹಂತ ಸೌಹಾರ್ದ ಸಹಕಾರಿ ಸಂಘ ಇಂದು ಹೆಮ್ಮರವಾಗಿ ಬೆಳೆದಿದ್ದು ಆರ್ಥಿಕ ವರ್ಷಾಂತ್ಯಕ್ಕೆ 5.72ಕೋಟಿ ರೂ ನಿವ್ಹಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಬಿ.ಬಿ.ಚೌಗಲಾ ಹೇಳಿದರು.
ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕ ಸೌಲಭ್ಯಗಳೊಂದಿಗೆ ಗ್ರಾಹಕರು ಮತ್ತು ಸದಸ್ಯರಿಗೆ ತ್ವರಿತಗತಿಯಲ್ಲಿ ಸೇವೆ ಸಲ್ಲಿಸಲಾಗುತ್ತಿದೆ. ಈ ಮೂಲಕ ಬ್ಯಾಂಕ್ ಪ್ರಗತಿಯತ್ತ ಸಾಗಿ ಜನಸ್ನೇಹಿ ಆಡಳಿತಕ್ಕೆ ಹೆಸರುವಾಸಿಯಾದ ಸಹಕಾರಿಯು ಪ್ರಧಾನ ಕಚೇರಿ ಸೇರಿ ಒಟ್ಟು 11 ಶಾಖೆಗಳನ್ನು ಹೊಂದಿದೆ ಎಂದರು.
ಪ್ರಧಾನ ವ್ಯವಸ್ಥಾಪಕ ಆನಂದ ಚೌಗಲಾ ಮಾತನಾಡಿ ಸಹಕಾರಿಯು 18543ಜನ ಸದಸ್ಯರನ್ನು ಹೊಂದಿದ್ದು ಒಟ್ಟು 1992 ಕೋಟಿ ರೂ ವಹಿವಾಟು ನಡೆಸಿದ್ದು 1.18 ಕೋಟಿ ಶೇರು ಬಂಡವಾಳವಿದೆ. 30 ಕೋಟಿ ಕಾಯ್ದಿಟ್ಟ ಹಾಗೂ ಇತರೆ ನಿಧಿಗಳಿದ್ದು 392 ಕೋಟಿ ದುಡಿಯುವ ಬಂಡವಾಳವಿದೆ. 214 ಕೋಟಿ ರೂ ಸಾಲ ವಿತರಿಸಲಾಗಿದ್ದು 297 ಕೋಟಿ ರೂ ಠೇವುಗಳಿವೆ. 114 ಕೋಟಿ ಗುಂತಾವಣೆಗಳಿದ್ದು ಆರ್ಥಿಕ ವರ್ಷದ 31 ಮಾರ್ಚ್ 2025ರವರೆಗೆ ಸುಮಾರು 5.72 ಕೋಟಿ ರೂ ನಿವ್ಹಳ ಲಾಭ ಗಳಿಸಿದೆ ಎಂದು ವಿವರಿಸಿದರು.ಶೇ. 97.50 ರಷ್ಟು ಸಾಲ ವಸೂಲಾತಿ ಆಗಿದ್ದು ಶೇ.25 ರಷ್ಟು ಲಾಭಾಂಶ ವಿತರಿಸಲಾಗಿದೆ ಎಂದರು.
ಉಪಾಧ್ಯಕ್ಷ ಬಾಹುಬಲಿ ನಾಗನೂರಿ, ನಿರ್ದೇಶಕರಾದ ರಾಮಣ್ಣಾ ಗೋಟೂರಿ, ಜಯಪಾಲ ಚೌಗಲಾ, ರವೀಂದ್ರ ಚೌಗಲಾ, ಮಾಯಪ್ಪಾ ಹೊಳೆಪ್ಪಗೋಳ, ಶೃತಿ ಅಶೋಕ ಪಾಟೀಲ, ಪಿ.ಆರ್.ಚೌಗಲಾ, ಜಿನ್ನಪ್ಪಾ ಸಪ್ತಸಾಗರ, ಬಸವರಾಜ ಪಾಟೀಲ, ಪ್ರಕಾಶ ಚೌಗಲಾ, ಬಾಳಪ್ಪಾ ಸಂಕೇಶ್ವರಿ, ಅಶೋಕ ಚೌಗಲಾ, ಬಾಬು ಅಕ್ಕಿವಾಟೆ, ಸುಮತಿ ಚೌಗಲಾ ಮತ್ತಿತರರಿದ್ದರು. ಮಹಾವೀರ ಚೌಗಲಾ ಸ್ವಾಗತಿಸಿದರು.ಆನಂದ ಚೌಗಲಾ ನಿರೂಪಿಸಿದರು.ಅಜೀತ ಚೌಗಲಾ ವಂದಿಸಿದರು.