ಸನ್ 1997-98ರ ಸಾಲಿನಲ್ಲಿ ಹಸಿರು ಕ್ರಾಂತಿ ಸಂಪಾದಕರಾಗಿದ್ದ ದಿ.ಕಲ್ಯಾಣರಾವ ಮುಚಳಂಬಿ ಅವರು ಹುಕ್ಕೇರಿ ಹಿರೇಮಠಕ್ಕೆ ಆಗಮಿಸಿದ್ದಾಗ ಚಂದ್ರಶೇಖರ ಶಿವಾಚಾರ್ಯರರೊಂದಿಗೆ ಮಾತನಾಡಿ ನನ್ನನ್ನು ತಮ್ಮ ಪತ್ರಿಕೆಗೆ ಸುದ್ದಿ ಕಳುಹಿಸಲು ಪ್ರೋತ್ಸಾಹಿಸಿದರು. ಆ ಮೂಲಕ ಅಧಿಕೃತವಾಗಿ ಪತ್ರಕರ್ತನಾಗಿ ಕಾರ್ಯ ಪ್ರಾರಂಭಿಸಿದೆ.ಅ0ದಿನಿ0ದ ಇಂದಿನವರೆಗೆ ಕನ್ನಡಪ್ರಭ, ಇಂಡಿಯನ್ ಎಕ್ಸಪ್ರೆಸ್, ಸಂಯುಕ್ತ ಕರ್ನಾಟಕ, ಹೊಸದಿಗಂತ, ಲೋಕದರ್ಶನ, ಮತ್ತು ದೃಶ್ಯ ಮಾಧ್ಯಮಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿರುವೆ.ಇದೀಗ ೮ ವರ್ಷಗಳಿಂದ ರಾಜ್ಯದ ನಂಬರ 1 ಪತ್ರಿಕೆ ವಿಜಯವಾಣಿ ದಿನಪತ್ರಿಕೆ ತಾಲೂಕಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.
ಬದಲಾವಣೆ ಜಗದ ನಿಯಮ ಎನ್ನುವಂತೆ ನನ್ನ ಹಿತೈಷಿಗಳು, ಸಂಬAಧಿಕರು ಮತ್ತು ಸ್ನೇಹಿತರ ಒತ್ತಾಸೆಯಿಂದ ಡಿಜಿಟಲ್ ಯುಗದಲ್ಲಿ ಇದೀಗ ವೆಬ್‌ನ್ಯೂಸ್ ಪ್ರಾರಂಭಿಸುತ್ತಿದ್ದೇನೆ. ವಿಜಯವಾಣಿ ಪತ್ರಿಕೆ ವರದಿಯ ಜತೆಗೆ ಈ ವೆಬ್‌ನ್ಯೂಸ್ ಸಹ ಪ್ರಾರಂಭಿಸಲು ಆಶಿಸಿರುವೆ. ೨೮ ವರ್ಷಗಳ ಸುದೀರ್ಘ ಅವಧಿಯಲ್ಲಿ ಸಾಕಷ್ಟು ಸುದ್ದಿಗಳ ಜತೆಗೆ ವಿಶೇಷ ವರದಿಗಳನ್ನು ಪ್ರಚುರಪಡಿಸಿದ್ದೇನೆ.ವರದಿಗಾರನಾಗಿ ಹಲವಾರು ಸಿಹಿ-ಕಹಿ ಘಟನೆಗಳನ್ನು ಕಂಡಿರುವೆ. ಅವುಗಳನ್ನು ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ತಮ್ಮೊಂದಿಗೆ ಹಂಚಿಕೊಳ್ಳುವೆ.
ಕನ್ನಡಿಗರು ನೆಲೆಸಿರುವ ದೇಶ ಮತ್ತು ವಿದೇಶದ ತುಂಬೆಲ್ಲ ನಮ್ಮ ನಾಡಿನ ವಿಶೇಷ ವರದಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸುಂಕದ ಮೀಡಿಯಾ ವೆಬ್‌ನ್ಯೂಸ್ ಮೂಲಕ ತಲುಪಿಸುವ ಹಂಬಲ ನನ್ನದಾಗಿದೆ. ಕಾರಣ ತಮ್ಮ ಪ್ರೀತಿ ವಿಶ್ವಾಸದ ಬೆಂಬಲ ಮತ್ತು ಆಶೀರ್ವಾದ ನನಗೂ ಮತ್ತು ನಮ್ಮ ನ್ಯೂಸ್ ಬಳಗಕ್ಕೆ ಇರಲಿ.
ಬಾಬು ಸುಂಕದ ಪ್ರಧಾನ ಸಂಪಾದಕರು ಸುಂಕದ ಮೀಡಿಯಾ ವೆಬ್‌ನ್ಯೂಸ್
ಸಾಗಿ ಬಂದ ದಾರಿಯ ನೆನಪು
