https://sunkadmedia.com/ ಸತ್ಯ ಸುದ್ದಿಗೆ ಹೊಸ ದಿಕ್ಕು, ಸುಂಕದ ಮೀಡಿಯಾ! Fri, 04 Apr 2025 17:18:03 +0000 en-US hourly 1 https://wordpress.org/?v=6.7.2 243073622 ಹುಕ್ಕೇರಿ ತಾಲೂಕಿನ ನೇರಲಿ ಗ್ರಾಮದ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ https://sunkadmedia.com/hukkeri-nerli-jatra-mahotsav/ https://sunkadmedia.com/hukkeri-nerli-jatra-mahotsav/#respond Fri, 04 Apr 2025 17:17:42 +0000 https://sunkadmedia.com/?p=319 ತಾಲೂಕಿನ ನೇರಲಿ ಗ್ರಾಮದ ಬಸವೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ಗುರು ಹಿರಿಯರು ಮತ್ತು ಮುಖಂಡರೊಂದಿಗೆ ಶಾಸಕ ನಿಖಿಲ ಕತ್ತಿ ಮತ್ತು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಚೇರಮನ್…

The post ಹುಕ್ಕೇರಿ ತಾಲೂಕಿನ ನೇರಲಿ ಗ್ರಾಮದ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ appeared first on .

]]>

ತಾಲೂಕಿನ ನೇರಲಿ ಗ್ರಾಮದ ಬಸವೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ಗುರು ಹಿರಿಯರು ಮತ್ತು ಮುಖಂಡರೊಂದಿಗೆ ಶಾಸಕ ನಿಖಿಲ ಕತ್ತಿ ಮತ್ತು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಚೇರಮನ್ ಪವನ ಕತ್ತಿ.

ಹುಕ್ಕೇರಿ ತಾಲೂಕಿನ ನೇರಲಿ ಗ್ರಾಮದ ಬಸವೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ಹುಳಪಲ್ಲೆ ಜೋಳದ ರೊಟ್ಟಿ ಮತ್ತು ಹುಗ್ಗಿ ಹಬ್ಬ ಆಚರಿಸುವ ಪದ್ದತಿ ವಿಶಿಷ್ಟವಾಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

         ಗುರುವಾರದಂದು ತಾಲೂಕಿನ ನೇರಲಿ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಗ್ರಾಮದ ಗೌಡರಿಂದ ಹುಳಪಲ್ಲೆ ಮತ್ತು ರೊಟ್ಟಿ ಹಬ್ಬ ಆದರೆ ಜಾತ್ರಾ ಮಹೋತ್ಸವ ಸಮಿತಿಯವರು ಹುಗ್ಗಿ ಊಟ ಮಾಡಿಸುತ್ತಾರೆ. ಒಂದೊಂದು ಗ್ರಾಮದಲ್ಲಿ ಒಂದು ವಿಶಿಷ್ಟ ಪದ್ದತಿಗಳ ಆಚರಣೆ ಇರುತ್ತದೆ ಎಂದರು.ಬಸವೇಶ್ವರ ದೇವಸ್ಥಾನಕ್ಕೆ ನಮ್ಮ ತಂದೆ ದಿ.ಉಮೇಶ ಕತ್ತಿ ಸಭಾಭವನ, ಕುಡಿಯುವ ನೀರು ಸೇರಿದಂತೆ ಹಲವಾರು ಯೋಜನೆಗಳನ್ನು ಮಾಡಿ ಕೊಟ್ಟಿರುವರು.ಮುಂಬರುವ ದಿನಗಳಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಚೇರಮನ್ ಪವನ ಕತ್ತಿ ಅವರು ಮಾತನಾಡಿ ನೇರಲಿ ಗ್ರಾಮದ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ ತಾಲೂಕಿನಲ್ಲಿಯೇ ವಿಶಿಷ್ಟವಾಗಿದೆ.ಇಲ್ಲಿಯ ಜನರಲ್ಲಿ ಇರುವ ಜಾತೀಯ ಸಾಮರಸ್ಯ ನಾಡಿಗೆ ಮಾದರಿಯಾಗಿದೆ ಎಂದರು.

ತಾಲೂಕಿನ ನೇರಲಿ ಗ್ರಾಮದ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ ಸಮಿತಿಯವರು ಶಾಸಕ ನಿಖಿಲ ಕತ್ತಿ ಮತ್ತು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಚೇರಮನ್ ಪವನ ಕತ್ತಿ ಸಹೋದರರನ್ನು ಸತ್ಕರಿಸಿದರು.

          ಜಾತ್ರಾ ಮಹೋತ್ಸವ ಸಮಿತಿಯಿಂದ ನಿಖಿಲ ಮತ್ತು ಪವನ ಕತ್ತಿ ಸಹೋದರರನ್ನು ಸತ್ಕರಿಸಿದರು.

     ರಾಜುಗೌಡ ಪಾಟೀಲ, ಸತೀಶ ಶೇಡಬಾಳೆ, ರಾಕೇಶ ಪಾಟೀಲ, ಕಲಗೌಡ ಪಾಟೀಲ, ರವಿ ಪಾಟೀಲ, ಸುಚಿತ ಪಾಟೀಲ, ಬಸಗೌಡ ಪಾಟೀಲ, ಶಿವಪ್ಪಾ ಲಬ್ಬಿ, ವಿನಾಯಕ ಸಂಕೇಶ್ವರ, ನಾಗೇಶ ಪಾಟೀಲ, ಬಸಗೌಡ ಮಾಳಗಿ  ಮತ್ತಿತರರಿದ್ದರು.

The post ಹುಕ್ಕೇರಿ ತಾಲೂಕಿನ ನೇರಲಿ ಗ್ರಾಮದ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ appeared first on .

]]>
https://sunkadmedia.com/hukkeri-nerli-jatra-mahotsav/feed/ 0 319
ಜಾತ್ರಾ ಮಹೋತ್ಸವದಿಂದ ಆಚಾರ, ವಿಚಾರ ಮತ್ತು ಸಂಸ್ಕೃತಿ ಬೆಳೆಯುತ್ತದೆ: ಶಾಸಕ ನಿಖಿಲ ಕತ್ತಿ https://sunkadmedia.com/jatra-mahotsavadinda-aachara-vichara-mattu-sanskruti-beleyuttade-mla-nikhil-katti/ https://sunkadmedia.com/jatra-mahotsavadinda-aachara-vichara-mattu-sanskruti-beleyuttade-mla-nikhil-katti/#respond Tue, 01 Apr 2025 10:20:07 +0000 https://sunkadmedia.com/?p=304 ತಾಲೂಕಿನ ಬಸ್ತವಾಡ ಗ್ರಾಮದ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಶಾಸಕ ನಿಖಿಲ ಕತ್ತಿ ಅವರನ್ನು ಸನ್ಮಾನಿಸಿದರು. ಸುರೇಶ ವಂಟಮೂರಿ, ಅಶೋಕ ಪಾಟೀಲ, ಪರಗೌಡ ಪಾಟೀಲ, ಗುರುರಾಜ ಕುಲಕರ್ಣಿ, ಆನಂದ…

The post ಜಾತ್ರಾ ಮಹೋತ್ಸವದಿಂದ ಆಚಾರ, ವಿಚಾರ ಮತ್ತು ಸಂಸ್ಕೃತಿ ಬೆಳೆಯುತ್ತದೆ: ಶಾಸಕ ನಿಖಿಲ ಕತ್ತಿ appeared first on .

]]>

ತಾಲೂಕಿನ ಬಸ್ತವಾಡ ಗ್ರಾಮದ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಶಾಸಕ ನಿಖಿಲ ಕತ್ತಿ ಅವರನ್ನು ಸನ್ಮಾನಿಸಿದರು. ಸುರೇಶ ವಂಟಮೂರಿ, ಅಶೋಕ ಪಾಟೀಲ, ಪರಗೌಡ ಪಾಟೀಲ, ಗುರುರಾಜ ಕುಲಕರ್ಣಿ, ಆನಂದ ಲಕ್ಕುಂಡಿ ಇತರರಿದ್ದರು.

ಭಾರತೀಯ ಪರಂಪರೆಯಲ್ಲಿ ಜಾತ್ರೆ, ಧಾರ್ಮಿಕ ಸಭೆ ಸಮಾರಂಭಗಳಿಗೆ ಹೆಚ್ಚಿನ ಆದ್ಯತೆ.ಇದರಿಂದ ಒಳ್ಳೆಯ ಆಚಾರ ವಿಚಾರ ಮತ್ತು ಸಂಸ್ಕೃತಿ ಬೆಳೆಯುತ್ತದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಸೋಮವಾರದಂದು ತಾಲೂಕಿನ ಬಸ್ತವಾಡ ಗ್ರಾಮದ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.ರಾಜ್ಯ ಗಡಿಭಾಗವಾಗಿರುವ ನಮ್ಮ ತಾಲೂಕು ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಸರಾಗಿದೆ.ಪ್ರತಿಯೊಂದು ಗ್ರಾಮದಲ್ಲಿ ಬೇಸಿಗೆ ಬಿಡುವಿನಲ್ಲಿ ಜಾತ್ರೆಗಳು ಜರುಗುತ್ತವೆ.ಇಂತಹ ಸಂದರ್ಭದಲ್ಲಿ ಸರ್ವ ಧರ್ಮೀಯರು ಪಾಲ್ಗೊಂಡು ಸೌಹಾರ್ದಯುತವಾಗಿ ಜಾತ್ರಾ ಮಹೋತ್ಸವ ಆಚರಿಸುವುದು ಶ್ಲಾಘನೀಯವೆಂದರು.ಇದೇ ಸಂದರ್ಭದಲ್ಲಿ ಕಾಡಸಿದ್ದೇಶ್ವರ ದೇವಸ್ಥಾನ ಜೀರ್ಣೋದ್ದಾರ ಸಮಿತಿಯಿಂದ ಶಾಸಕರನ್ನು ಸತ್ಕರಿಸಿದರು.
ತಾಲೂಕಿನ ಬಸ್ತವಾಡ ಗ್ರಾಮದೇವರಾದ ಕಾಡಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ (ಯುಗಾದಿ ಅಮವಾಸ್ಯೆಯಿಂದ) ಶನಿವಾರ ಮಾ.29 ರಿಂದ ಬುಧವಾರ ಎ.2 ರವರೆಗೆ 5 ದಿನಗಳ ಕಾಲ ಸಂಭ್ರಮದಿಂದ ಜರುಗುತ್ತದೆ.
ವಿಧಾನ ಪರಿಷತ್ ಸದಸ್ಯ, ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ದೇವರ ಆಶೀರ್ವಾದ ಪಡೆದರು.
ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷ ಸುರೇಶ ವಂಟಮೂರಿ, ಆನಂದ ಲಕ್ಕುಂಡಿ, ಅಶೋಕ ಪಾಟೀಲ, ಸಂಜು ಮಗದುಮ್ಮ, ಶಂಕರಗೌಡ ಪಾಟೀಲ, ದಾನಯ್ಯಾ ಮಠದ, ಬಸ್ಸಯ್ಯಾ ಪೂಜೇರಿ, ವಿನಾಯಕ ವಂಟಮೂರಿ ಮುಖಂಡರಾದ ಪರಗೌಡ ಪಾಟೀಲ, ಗುರುರಾಜ ಕುಲಕರ್ಣಿ, ರಾಜು ಮುನ್ನೋಳಿ ಮತ್ತಿತರರಿದ್ದರು.


The post ಜಾತ್ರಾ ಮಹೋತ್ಸವದಿಂದ ಆಚಾರ, ವಿಚಾರ ಮತ್ತು ಸಂಸ್ಕೃತಿ ಬೆಳೆಯುತ್ತದೆ: ಶಾಸಕ ನಿಖಿಲ ಕತ್ತಿ appeared first on .

]]>
https://sunkadmedia.com/jatra-mahotsavadinda-aachara-vichara-mattu-sanskruti-beleyuttade-mla-nikhil-katti/feed/ 0 304
ಬನ್ನೂರು ಶ್ರೀಗಳಿಗೆ ಪಂಚಾಚಾರ್ಯ ಶ್ರೀ ಪ್ರಶಸ್ತಿ : ಹಿರಿತನಕ್ಕೆ ಸಂದ ಗೌರವ ಕಟಕೋಳ ಎಂ. ಚಂದರಗಿಯ ಶ್ರೀಗಳು https://sunkadmedia.com/bannuru-shrigalige-panchacharya-shri-prashasti/ https://sunkadmedia.com/bannuru-shrigalige-panchacharya-shri-prashasti/#respond Tue, 01 Apr 2025 08:32:09 +0000 https://sunkadmedia.com/?p=295 ರಾಮದುರ್ಗ ತಾಲೂಕಿನ ಬನ್ನೂರು ಚಿಕ್ಕಮಠದಲ್ಲಿ ಬನ್ನೂರಿನ ಸಿದ್ದಲಿಂಗ ಶಿವಾಚಾರ್ಯರಿಗೆ ಪಂಚಾಚಾರ್ಯ ಶ್ರೀ ಪ್ರಶಸ್ತಿ ಗೌರವಿಸಿದರು. ವೀರಭದ್ರ ಶಿವಾಚಾರ್ಯರು, ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯರು ಇತರರಿದ್ದರು.. ಶ್ರೀ…

The post ಬನ್ನೂರು ಶ್ರೀಗಳಿಗೆ ಪಂಚಾಚಾರ್ಯ ಶ್ರೀ ಪ್ರಶಸ್ತಿ : ಹಿರಿತನಕ್ಕೆ ಸಂದ ಗೌರವ ಕಟಕೋಳ ಎಂ. ಚಂದರಗಿಯ ಶ್ರೀಗಳು appeared first on .

]]>

ರಾಮದುರ್ಗ ತಾಲೂಕಿನ ಬನ್ನೂರು ಚಿಕ್ಕಮಠದಲ್ಲಿ ಬನ್ನೂರಿನ ಸಿದ್ದಲಿಂಗ ಶಿವಾಚಾರ್ಯರಿಗೆ ಪಂಚಾಚಾರ್ಯ ಶ್ರೀ ಪ್ರಶಸ್ತಿ ಗೌರವಿಸಿದರು. ವೀರಭದ್ರ ಶಿವಾಚಾರ್ಯರು, ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯರು ಇತರರಿದ್ದರು..

ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವದ ಸವಿ ನೆನವಿನಲ್ಲಿ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಿಂದ ನೀಡುತ್ತಿರುವ ಪಂಚಾಚಾರ್ಯ ಶ್ರೀ ಪ್ರಶಸ್ತಿ ಈ ವರ್ಷ ಬನ್ನೂರು ಚಿಕ್ಕಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ ದೊರಕಿದೆ.

ರವಿವಾರ ಯುಗಾದಿ ದಿನದಂದು ರಾಮದುರ್ಗ ತಾಲೂಕಿನ ಬನ್ನೂರು ಚಿಕ್ಕಮಠದಲ್ಲಿ ಬನ್ನೂರಿನ ಸಿದ್ದಲಿಂಗ ಶಿವಾಚಾರ್ಯರಿಗೆ ಪಂಚಾಚಾರ್ಯ ಶ್ರೀ ಪ್ರಶಸ್ತಿ ಗೌರವಿಸಿ ಮಾತನಾಡಿದ ಕಟಕೋಳ ಎಂ.ಚಂದರಗಿ ಹಿರೇಮಠದ ವೀರಭದ್ರ ಶಿವಯೋಗಿ ಶಿವಾಚಾರ್ಯರು ಒಬ್ಬ ಸಾತ್ವಿಕ, ತಾತ್ವಿಕ ಮತ್ತು ಆಚಾರವಂತ ಸ್ವಾಮೀಜಿಗಳಿಗೆ ನೀಡುವುದರ ಮೂಲಕ ಹುಕ್ಕೇರಿ ಶ್ರೀಗಳು ಹಿರಿತನಕ್ಕೆ ಕೊಟ್ಟ ಗೌರವಿಸಿದ್ದಾರೆಂದರು. ಹುಕ್ಕೇರಿ ಶ್ರೀಗಳು ಪ್ರತಿವರ್ಷ ಪಂಚಾಚಾರ್ಯ ಪ್ರಶಸ್ತಿಯನ್ನು ಹಿರಿಯ ಸ್ವಾಮೀಜಿಗಳಿಗೆ ನೀಡುತ್ತ ಬರುತ್ತಿರುವುದು ಸಂತಸದ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾಗೋಜಿಕೊಪ್ಪ, ಹಿರೇಮಠದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯರು ಮಾತನಾಡಿ ಹಿರಿಯರು ಇದ್ದಲ್ಲಿಯೇ ಹೋಗಿ ಗೌರವಿಸುವಂತಹ ಸಂಪ್ರದಾಯವನ್ನು ಹುಕ್ಕೇರಿ ಹಿರೇಮಠ ಹಾಕಿರುವುದು ದೇಶದ ಮೊದಲ ಮಠ ಎಂದರು.

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಬನ್ನೂರು ಚಿಕ್ಕಮಠ ಸಿದ್ದಲಿಂಗ ಶಿವಾಚಾರ್ಯರು ಹುಕ್ಕೇರಿ ಶ್ರೀಗಳು ಪಂಚಪೀಠದ ಸೇನಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕೊಟ್ಟಿರುವ ಈ ಪ್ರಶಸ್ತಿ ನಮ್ಮ ಭಕ್ತರಿಗೆ ಸಲ್ಲುತ್ತದೆ ಎಂದರು. ಪಂಚಾಚಾರ್ಯ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಯುಗಾದಿಯ ಪಾಡ್ಯದಂದು ಎಲ್ಲರೂ ತಮ್ಮ ಮನೆ, ಮಠಗಳಲ್ಲಿ ಪಂಚಾಚಾರ್ಯ ಯುಗಮಾನೋತ್ಸವದ ದಿನವನ್ನಾಗಿ ಆಚರಿಸಬೇಕು. ಭಾರತೀಯ ಪರಂಪರೆಯಲ್ಲಿ ಪಂಚಪೀಠಗಳು ತುಂಬಾ ಪುರಾತನವಾದವು ಎಂದರು.

ಕಟಕೋಳ ಎಂ.ಚಂದರಗಿಯ ಉತ್ತರಾಧಿಕಾರಿ ರೇಣುಕ ಗಡದೇಶ್ವರ ದೇವರು.ಹುಕ್ಕೇರಿ ಹಿರೇಮಠದ ಗುರುಕುಲದ ಕಾರ್ತಿಕ ಶಾಸ್ತ್ರಿಗಳು, ಮಲ್ಲಿಕಾರ್ಜುನ ಶಾಸ್ತ್ರಿಗಳು, ಕಾವೇರಿ ರೋಗಿ, ಮಹಾಂತೇಶ ವಾಲಿ, ಸುರೇಶ ಹಿರೇಮಠ, ಲೋಕಾಪುರೆ ಮತ್ತಿತರಿದ್ದರು. ಮಹಾಂತೇಶ ವಾಲಿ ನಿರೂಪಿಸಿ ವಂದಿಸಿದರು.

The post ಬನ್ನೂರು ಶ್ರೀಗಳಿಗೆ ಪಂಚಾಚಾರ್ಯ ಶ್ರೀ ಪ್ರಶಸ್ತಿ : ಹಿರಿತನಕ್ಕೆ ಸಂದ ಗೌರವ ಕಟಕೋಳ ಎಂ. ಚಂದರಗಿಯ ಶ್ರೀಗಳು appeared first on .

]]>
https://sunkadmedia.com/bannuru-shrigalige-panchacharya-shri-prashasti/feed/ 0 295
ಹುಕ್ಕೇರಿ ಮತಕ್ಷೇತ್ರದ ಭಗೀರಥ ಯಾರು? https://sunkadmedia.com/hukkeri-matakshetrada-bhagiratha-yaru/ https://sunkadmedia.com/hukkeri-matakshetrada-bhagiratha-yaru/#respond Sun, 30 Mar 2025 02:32:00 +0000 https://sunkadmedia.com/?p=254 ಹುಕ್ಕೇರಿ ಮತ್ತು ಸಂಕೇಶ್ವರ ಪಟ್ಟಣ ಸನ್ 2010ರಕ್ಕಿಂತ ಮೊದಲು ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಪರದಾಡುತ್ತಿದ್ದ ದೃಶ್ಯ ಇತಿಹಾಸ ಆಗಿದೆ. ಇದೇ ರೀತಿ ತಾಲೂಕಿನ ಬಹು ಗ್ರಾಮಗಳು ಕುಡಿಯುವ…

The post ಹುಕ್ಕೇರಿ ಮತಕ್ಷೇತ್ರದ ಭಗೀರಥ ಯಾರು? appeared first on .

]]>
ಹುಕ್ಕೇರಿ ತಾಲೂಕಿನ ಹುಲ್ಲೋಳಿಹಟ್ಟಿ ಗ್ರಾಮದ ಕೆರೆಗೆ ಮಾಜಿ ಸಂಸದರಾದ ರಮೇಶ ಕತ್ತಿ ಇವರಿಂದ ಬಾಗಿನ ಅರ್ಪಣೆ

ಹುಕ್ಕೇರಿ ಮತ್ತು ಸಂಕೇಶ್ವರ ಪಟ್ಟಣ ಸನ್ 2010ರಕ್ಕಿಂತ ಮೊದಲು ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಪರದಾಡುತ್ತಿದ್ದ ದೃಶ್ಯ ಇತಿಹಾಸ ಆಗಿದೆ. ಇದೇ ರೀತಿ ತಾಲೂಕಿನ ಬಹು ಗ್ರಾಮಗಳು ಕುಡಿಯುವ ನೀರಿನ ಭವಣೆ ಅನುಭವಿಸಿದ್ದವು. ಈ ಮೊದಲು ನೀರಿನ ಭವಣೆ ಅರಿತ ನಿವಾಸಿಗಳಿಗೆ ಆ ದುಸ್ವಪ್ನ ಸ್ಮರಿಸಿಕೊಳ್ಳುತ್ತಾರೆ. ಇದೀಗ ಎರಡು ದಿನಕ್ಕೊಮ್ಮೆ ಪಟ್ಟಣವಾಸಿಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಈಗಿನ ಯುವ ಜನಾಂಗಕ್ಕೆ ಆ ದಿನಗಳ ಸಮಸ್ಯೆ ಗೊತ್ತಿಲ್ಲ.

ತಾಲೂಕಿನ 30ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವುದರಿAದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಸಿರು ಕಂಗೊಳಿಸುತ್ತಿದೆ. ಪಟ್ಟಣವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲದಂತಾಗಿದೆ.
ಹುಕ್ಕೇರಿ ಮತಕ್ಷೇತ್ರದಲ್ಲಿ ಹಸಿರು ಕಂಗೊಳಿಸಲು ಕಾರಣೀಕರ್ತರಾದವರನ್ನು ನೆನಪಿಸಿಕೊಳ್ಳಬೇಕು.ನೀರಾವರಿ ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿದ ಭಗೀರಥ ಯಾರು ಎಂಬ ಪ್ರಶ್ನೆ ಕೆಲವರದ್ದಾಗಿದೆ.ಈ ಕುರಿತು ವಿಶೇಷ ವರದಿ.

ಹುಕ್ಕೇರಿ ತಾಲೂಕಿನ ಸಾರಾಪೂರ ಗ್ರಾಮದ ಕೆರೆಯನ್ನು ವೀಕ್ಷಿಸುತ್ತಿರುವ ಮಾಜಿ ಸಚಿವ ದಿ.ಉಮೇಶ ಕತ್ತಿ


ಸನ್ 2009ರಲ್ಲಿ ಆಗಿನ ಸಂಸದರಾಗಿದ್ದ ರಮೇಶ ಕತ್ತಿ ಅವರು ರಾಜ್ಯ ಸರಕಾರದ ಜಲಸಂಪನ್ಮೂಲ ಸಚಿವರಿಗೆ ಮತ್ತು ಕರ್ನಾಟಕ ನೀರಾವರಿ ನಿಗಮದ ಎಂ.ಡಿ ಅವರಿಗೆ ಹಿರಣ್ಯಕೇಶಿ ನದಿಯಿಂದ ನೀರನ್ನು ಹುಕ್ಕೇರಿ ತಾಲೂಕಿನ ಹರಗಾಪೂರ ಗಡದವರೆಗೆ ಲಿಪ್ಟ್ ಮಾಡಿ 15 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಟಾನಗೊಳಿಸಲು ಮನವಿಸಿಕೊಳ್ಳುವ ಮೂಲಕ ಹುಕ್ಕೇರಿ ಮತಕ್ಷೇತ್ರದ ನೀರಾವರಿಗೆ ಚಾಲನೆ ದೊರಕಿತು.ನಂತರದ ದಿನಗಳಲ್ಲಿ ಮಾಜಿ ಸಚಿವ ಉಮೇಶ ಕತ್ತಿ ಅವರು ಮತ್ತಷ್ಟು ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಂಡರು.ಇದರ ಜತೆಗೆ ಘಟಪ್ರಭಾ ನದಿಯಿಂದ ಹಿರಣ್ಯಕೇಶಿ ನದಿಯ 6 ಬ್ಯಾರೇಜುಗಳಿಗೆ ನೀರು ಹರಿಸುವ ಯೋಜನೆ ಮಂಜೂರಾತಿ ಮಾಡಿಸಿದರು.ಆದರೆ ಅವರ ನಿಧನಾನಂತರ ಆ ಯೋಜನೆ ನೆನೆಗುದಿಗೆ ಬಿದ್ದಿತು.
ಇದೀಗ ಶಾಸಕ ನಿಖಿಲ ಕತ್ತಿ ಬ್ಯಾರೇಜ್ ತುಂಬಿಸುವ ಯೋಜನೆಗೆ ಅನುದಾನ ಮಂಜೂರಿ ಮಾಡಿಸುವ ಮೂಲಕ ತಂದೆ ದಿ.ಉಮೇಶ ಕತ್ತಿ ಮತ್ತು ಚಿಕ್ಕಪ್ಪ ರಮೇಶ ಕತ್ತಿ ಅವರ ಕನಸನ್ನು ನನಸು ಮಾಡಿರುವರು.ಇದರ ಜತೆಗೆ ಹುಕ್ಕೇರಿ ಪೂರ್ವಭಾಗದ 19 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಮುಕ್ತಾಯಗೊಳಿಸಿದ್ದು ಬರುವ ಜುಲೈ ತಿಂಗಳಲ್ಲಿ ಅವುಗಳಿಗೂ ನೀರು ತುಂಬಿಸುವ ಕಾರ್ಯ ಪ್ರಾರಂಭವಾಗಲಿದೆ.ಈ ಮೂಲಕ ಹುಕ್ಕೇರಿ ಮತಕ್ಷೇತ್ರದಲ್ಲಿ ಸುಜಲಾಂ ಸುಫಲಾಂ ಕಾರ್ಯ ಕತ್ತಿ ಕುಟುಂಬದಿಂದಾಗಿದೆ ಎಂಬುದು ಬಹುತೇಕ ಮುಖಂಡರ ಅಭಿಪ್ರಾಯವಾಗಿದೆ. ತನ್ಮೂಲಕ ಹುಕ್ಕೇರಿ ಮತಕ್ಷೇತ್ರದ ಭಗೀರಥ ಯಾರು ಎಂಬುದನ್ನು ಓದುಗರು ತಿಳಿಸಬೇಕು.

MLA Nikhil Katti

ಹುಕ್ಕೇರಿ ತಾಲೂಕಿನ ರೈತರು ನೀರಾವರಿ ಯೋಜನೆಗಳಿಂದ ತಮ್ಮ ಜಮೀನುಗಳಲ್ಲಿ ವರ್ಷವಿಡಿ ಹಸಿರು ಕಂಗೊಳಿಸುವುದರ ಜತೆಗೆ ಹುಕ್ಕೇರಿ ಮತಕ್ಷೇತ್ರ ಸುಜಲಾಂ ಸುಫಲಾಂ ಆಗಲಿ ಎಂದು ಕನಸನ್ನು ಕಾಣುತ್ತಿದ್ದ ಮಾಜಿ ಶಾಸಕ ದಿ.ಉಮೇಶ ಕತ್ತಿ ಅವರು ಕಂಡ ಕನಸು ನನಸಾಗುತ್ತಿದೆ. ಈ ಕುರಿತು ವಿಶೇಷ ವರದಿ.
ದೀಪದ ಕೆಳಗೆ ಕತ್ತಲು: ತಾಲೂಕಿನಲ್ಲಿ ಮಾರ್ಕಂಡೇಯ ಮತ್ತು ಹಿಡಕಲ್ ಜಲಾಶಯಗಳಿದ್ದರೂ ಹುಕ್ಕೇರಿ ತಾಲೂಕಿನ ಉತ್ತರ ಮತ್ತು ದಕ್ಷಿಣ ಭಾಗದ ರೈತರು ನೀರಾವರಿ ವಂಚಿತರಾಗುವ ಮೂಲಕ ದೀಪದ ಕೆಳಗೆ ಕತ್ತಲು ಎಂಬಂತ್ತಾಗಿದೆ. ತಾಲೂಕಿನ 2 ಜಲಾಶಗಳಿಂದ ನೆರೆಯ ಜಿಲ್ಲೆ ಮತ್ತು ತಾಲೂಕುಗಳಿಗೆ ಮಾತ್ರ ಹೆಚ್ಚಿನ ನೀರಾವರಿ ಅನುಕೂಲವಾಗಿದೆ. ಆದರೆ ಹುಕ್ಕೇರಿ ತಾಲೂಕಿನ ಶೇಕಡಾ 20 ರಷ್ಟು ಕ್ಷೇತದ ರೈತರಿಗೆ ಮಾತ್ರ ಇದರಿಂದ ಪ್ರಯೋಜನವಾಗಿದೆ.
ಹುಕ್ಕೇರಿ ಮತ್ತು ಯಮಕನಮರಡಿ ಕ್ಷೇತ್ರದ ಜನರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸನ್ 2008ರಲ್ಲಿ ದಿ.ಉಮೇಶ ಕತ್ತಿ ಮತ್ತು ಸನ್ 2009ರಲ್ಲಿ ಆಗಿನ ಸಂಸದರಾಗಿದ್ದ ರಮೇಶ ಕತ್ತಿ ಅವರು ಜಲ ಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಹುಕ್ಕೇರಿ ತಾಲೂಕಿನ 19 ಹಾಗೂ ಚಿಕ್ಕೋಡಿ ತಾಲೂಕಿನ ೪ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲು ಮನವಿಸಿ ಕೊಂಡಿದ್ದರು. ಸನ್ 2014ರಲ್ಲಿ ಹಿರಣ್ಯಕೇಶಿ ನದಿಯಿಂದ ನೀರೆತ್ತಲು 77 ಕೋಟಿ ರೂ ವೆಚ್ಚದ ಕಾಮಗಾರಿಗೆ ಅನುಮೋದನೆ ದೊರಕಿ ನೀರು ತುಂಬಿಸಲಾಗುತ್ತಿದೆ.
6 ತಿಂಗಳು ಮಾತ್ರ ನದಿಯಲ್ಲಿ ನೀರು: ಹಿರಣ್ಯಕೇಶಿ ನದಿಯಲ್ಲಿ ಜುಲೈ ತಿಂಗಳಿನಿಂದ ಡಿಸೆಂಬರ್‌ವರೆಗೆ ಮಾತ್ರ ನೀರು ಹರಿಯುತ್ತದೆ.ಇನ್ನೂಳಿದ 6 ತಿಂಗಳು ಸಂಪೂರ್ಣ ಬತ್ತುವುದರಿಂದ ಕೆರೆ ತುಂಬಿಸುವ ಯೋಜನೆ ಇದ್ದು ಇಲ್ಲದಂತಾಗಿತ್ತು.ಜನರ ಕುಡಿಯುವ ನೀರಿನ ಭವಣೆ ತಪ್ಪಿಸಲು ಹಾಗೂ ಬೇಸಿಗೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕನಸನ್ನು ಕಂಡ ಮಾಜಿ ಶಾಸಕ ದಿ.ಉಮೇಶ ಕತ್ತಿ ಅವರು ಸರಕಾರಕ್ಕೆ ಸುಲ್ತಾನಪೂರ ಬಳಿಯ ಬ್ರಿಜ್ ಕಂ ಬಾಂಧಾರದಿಂದ ಕೆರೆಗಳಿಗೆ ನೀರು ಹರಿಸುವ ಚಿಂತನೆ ಮಾಡಿದರು.ಉಮೇಶ ಕತ್ತಿ ಸಚಿವರಾಗಿದ್ದಾಗ ಈ ಯೋಜನೆ ಮಂಡಿಸಿ ಅನುಮತಿ ಪಡೆದರು.ನಂತರ ಅವರ ನಿಧನದಿಂದ ಯೋಜನೆ ಸ್ಥಗಿತವಾಗಿತ್ತು.
ಈ ಯೋಜನೆ ಸಾಕಾರಗೊಳಿಸಲು ಶಾಸಕ ನಿಖಿಲ ಕತ್ತಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಮೂಲಕ ಸರಕಾರದಿಂದ ಮಂಜೂರಾತಿ ಪಡೆದರು.ಇದೀಗ ಸುಲ್ತಾನಪೂರ ಬಳಿ ನಿರ್ಮಿಸಿದ ಬ್ರಿಜ್ ಕಂ ಬಾಂಧಾರದಿಂದ ಪೈಪಲೈನ್ ಮೂಲಕ ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ಪಂಪಹೌಸ್ ನಿರ್ಮಿಸಿ ಹುಕ್ಕೇರಿ ಮತಕ್ಷೇತ್ರದ 19 ಕೆರೆಗಳಿಗೆ ನೀರು ತುಂಬಿಸುವ ೩೫ ಕೋಟಿ ರೂ ವೆಚ್ಚದ ಯೋಜನೆ ತಯಾರಿಸಿ ಸರಕಾರಕ್ಕೆ ಮಂಡಿಸಿ ಅನುಮತಿ ಪಡೆದರು.
ಯೋಜನೆಯ ಕಾಮಗಾರಿ ಭರದಿಂದ ಸಾಗಿದ್ದು ಬರುವ ಜುಲೈ ತಿಂಗಳಿನಿಂದ ತಾಲೂಕಿನ 19 ಕೆರೆಗಳಿಗೆ ನೀರು ತುಂಬಿಸಲು ಪ್ರಾರಂಭವಾಗಲಿದೆ.ಈ ಕಾಮಗಾರಿಯಿಂದ ಹುಕ್ಕೇರಿ ಮತಕ್ಷೇತ್ರದ 8 ಗ್ರಾಮಗಳ ರೈತರ ಒಂದು ಸಾವಿರ ಏಕರೆಗೂ ಹೆಚ್ಚಿನ ಪ್ರಮಾಣದ ಜಮೀನು ನೀರಾವರಿಗೆ ಒಳಪಡಲಿದೆ.ಒಟ್ಟಾರೆ ಹುಕ್ಕೇರಿ ಕ್ಷೇತ್ರದಲ್ಲೀಗ ಸುಜಲಾಂ ಸುಫಲಾಂ ಕನಸು ನನಸಾಗುತ್ತಿದೆ

ತಾಲೂಕಿನ ಸುಲ್ತಾನಪೂರ ಬಳಿ ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಜ್ ಕಂ ಬಾಂಧಾರದ ಬಳಿ ನಿರ್ಮಾಣಗೊಳ್ಳುತ್ತಿರುವ 19 ಕೆರೆಗಳಿಗೆ ನೀರು ತುಂಬಿಸುವ ಪಂಪಹೌಸ್ ವೀಕ್ಷಿಸಿದ ರಮೇಶ ಕತ್ತಿ. ಕಲಗೌಡ ಪಾಟೀಲ, ಬಿ.ಬಿ.ಪಾಟೀಲ, ಮಹಾದೇವ ಪಾಟೀಲ, ಬಸವಂತ ರಡ್ಡಿ ಮತ್ತಿತರರಿದ್ದರು.

ತಂದೆ ಕನಸನ್ನು ನನಸು ಮಾಡಿದ ಮಗ: ನನ್ನ ಅಣ್ಣ ಉಮೇಶ ಕತ್ತಿ ಕಂಡ ಕನಸನ್ನು ಸಾಕಾರಗೊಳಿಸಲು ಆ ಯೋಜನೆಯ ಪ್ರಗತಿಗೆ ಈಗಿನ ಶಾಸಕ ಸುಪುತ್ರ ನಿಖಿಲ ಕತ್ತಿ ಶ್ರಮಿಸುವ ಮೂಲಕ ಕಾರ್ಯ ಪ್ರಗತಿಯಲ್ಲಿದ್ದು ಇದೇ ವರ್ಷ ಜುಲೈ ತಿಂಗಳು ಮುಂಗಾರು ಹಂಗಾಮಿನಲ್ಲಿ ನೀರು ಹರಿಸುವ ಕಾರ್ಯ ಪ್ರಾರಂಭವಾಗಲಿದೆ.ಇದರಿಂದ ಒಂದು ಸಾವಿರ ಏಕರೆ ಹೆಚ್ಚಿಗೆ ನೀರಾವರಿ ಕ್ಷೇತ್ರ ಆಗುತ್ತದೆ.ಇದರ ಜತೆಗೆ ಅಂತರ್ ಜಲಮಟ್ಟ ವೃದ್ಧಿಯಾಗುವುದರಿಂದ ನೀರಾವರಿಗೆ ಹೆಚ್ಚಿನ ಒತ್ತು ಕೊಟ್ಟಂತಾಗುತ್ತದೆ.

ರಮೇಶ ಕತ್ತಿ ಮಾಜಿ ಸಂಸದರು.

Sanjay Malagi

ಯೋಜನೆಯ ನೀಲನಕ್ಷೆ: ಸುಲ್ತಾನಪೂರ ಬಳಿಯ ಬ್ರಿಜ್ ಕಂ ಬಾಂಧಾರದಿಂದ 35..752 M.C.F.T ನೀರೆತ್ತಲು 3 ಪೂಟಿನ ಪೈಪ್‌ಗಳ ಮೂಲಕ 18.084 ಕಿ.ಮೀ ಅಂತರದ ಪೈಪಲೈನ್ ಅಳವಡಿಸಲಾಗುತ್ತಿದೆ.ನೀರೆತ್ತಲು 375 ಎಚ್.ಪಿ ಸಾಮರ್ಥ್ಯದ 3 ಮೋಟರ್‌ಗಳನ್ನು ಅಳವಡಿಸಿದ್ದು ಇದರಲ್ಲಿ 2 ಮೋಟರ್ ನೀರೆತ್ತಲು ಬಳಸಿದರೆ ಒಂದನ್ನು 1 ಸ್ಟಾಂಡ್ ಬೈ ಆಗಿ ಬಳಸಲು ಇಟ್ಟುಕೊಳ್ಳಲಾಗಿದೆ. ಸಂಜಯ ಮಾಳಗಿ ಎ.ಇ.ಇ ಸಣ್ಣ ನೀರಾವರಿ ಇಲಾಖೆ.

MLA Nikhil Katti

ನನ್ನ ಮತಕ್ಷೇತ್ರದಲ್ಲಿನ ಬೆಳವಿ ಗ್ರಾಮದ 3, ಶೇಲಾಪೂರ 2, ಯಾದಗೂಡ 2, ಹುಕ್ಕೇರಿ ಶೆಟ್ಟಿ ಕೆರೆ, ಹುಲ್ಲೋಳಿಯ 6, ನೇರಲಿಯ 2, ಹಣಜ್ಯಾನಟ್ಟಿ 2 ಮತ್ತು ಎಲಿಮುನ್ನೋಳಿಯ 1 ಸೇರಿದಂತೆ ಒಟ್ಟು 19 ಕೆರೆಗಳಿಗೆ 47.67 M.C.F.Tನೀರು ತುಂಬಿಸಲಾಗುವುದು.

ಭಗೀರಥ ಪ್ರಯತ್ನಕ್ಕೆ ಸೂಕ್ತ ದಾಖಲೆಗಳು

The post ಹುಕ್ಕೇರಿ ಮತಕ್ಷೇತ್ರದ ಭಗೀರಥ ಯಾರು? appeared first on .

]]>
https://sunkadmedia.com/hukkeri-matakshetrada-bhagiratha-yaru/feed/ 0 254
ಭಾವೈಕ್ಯತೆಯ ಧ್ಯೋತಕ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದ ಶ್ರೀ ಕಾಡಸಿದ್ದೇಶ್ವರರ ಪುಣ್ಯಕ್ಷೇತ್ರ. https://sunkadmedia.com/bhavaikyatheya-dhyotaka-hukkeri/ https://sunkadmedia.com/bhavaikyatheya-dhyotaka-hukkeri/#respond Sun, 30 Mar 2025 02:15:00 +0000 https://sunkadmedia.com/?p=248 ಭಾರತದ ಇತಿಹಾಸದಲ್ಲಿ ಅನೇಕ ಮಹಾಪುರುಷರು, ಸಂತರು, ಋಷಿ ಮುನಿಗಳಿಗೆ ಜನ್ಮನೀಡಿದ ಪುಣ್ಯಭೂಮಿ. ಇಂತಹ ಶರಣ ಸಂಪ್ರದಾಯಕ್ಕೆ ಸೇರಿದ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದೇವರಾದ ಜಗದ್ಗುರು ಶ್ರೀ ಕಾಡಸಿದ್ದೇಶ್ವರ…

The post ಭಾವೈಕ್ಯತೆಯ ಧ್ಯೋತಕ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದ ಶ್ರೀ ಕಾಡಸಿದ್ದೇಶ್ವರರ ಪುಣ್ಯಕ್ಷೇತ್ರ. appeared first on .

]]>

ಭಾರತದ ಇತಿಹಾಸದಲ್ಲಿ ಅನೇಕ ಮಹಾಪುರುಷರು, ಸಂತರು, ಋಷಿ ಮುನಿಗಳಿಗೆ ಜನ್ಮನೀಡಿದ ಪುಣ್ಯಭೂಮಿ. ಇಂತಹ ಶರಣ ಸಂಪ್ರದಾಯಕ್ಕೆ ಸೇರಿದ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದೇವರಾದ ಜಗದ್ಗುರು ಶ್ರೀ ಕಾಡಸಿದ್ದೇಶ್ವರ ಮಹಿಮೆ ಅಪಾರ.

ಚರಿತ್ರೆಯನ್ನು ಅವಲೋಕಿಸಿದಾಗ ಏಳನೆಯ ಶತಮಾನದಲ್ಲಿ ಪರಮಾತ್ಮನ ಅವತಾರವೆರತ್ತಿದ ಮಹಾಸತ್ತಪುರುಷರು ತಮ್ಮ ಜೀವಿತಾವದಿಯಲ್ಲಿ ಜೀವರಾಶಿಗೆ ಭಕ್ತಿ, ಜ್ಞಾನ, ವೈರಾಗ್ಯ ಭೋದಿಸಿ. ಸಮಾಜದಲ್ಲಿನ ಮೂಢನಂಬಿಕೆ, ಢಂಬಾಚಾರಗಳನ್ನು ತ್ಯಜಿಸಿ, ಭಕ್ತಸಮೂಹಕ್ಕೆ ಧರ್ಮೊಪದ್ದೇಶ ಉಣಬಡಿಸಿದರು. ಶ್ರೀ ಕಾಡಸಿದ್ದೇಶ್ವರರು ಅಥಣಿ ತಾಲೂಕಿನ ಗುಂಡವಾಡಿ ಗ್ರಾಮದ ಗೌಡರ ಮನೆತನದಲ್ಲಿ ಜನಿಸಿದ್ದರೆಂದು ಪ್ರತೀತಿ ಇದೆ. ಕಠಿಣ ಪೂಜಾವೃತ ತಪಸ್ಸಿನಿಂದ ಜ್ಞಾನ ಶಕ್ತಿ ಸಂಪಾದಿಸಿದರು. ಕರ್ನಾಟಕ ಮಹಾರಾಷ್ಟ್ರದಿಂದ ಸಂಚರಿಸಿ ಧರ್ಮಪ್ರಚಾರ ಗೈಯುತ್ತಾ ಸುಮಾರು ಇನ್ನೂರಕ್ಕೂ ಹೆಚ್ಚು ಮಠಗಳನ್ನು ಸ್ಥಾಪಿಸಿದ್ದಾರೆ.

ಗೋಕಾಕ ತಾಲೂಕಿನ ಕೊಣ್ಣೂರಮಠದಿಂದ ಪಾದಯಾತ್ರೆ ಮಾಡುತ್ತಾ ಬಡಕುಂದ್ರಿ ಸಮೀಪದ ಹಿರಣ್ಯಕೇಶಿ ನದಿಯ ಹತ್ತಿರ ಬಂದಾಗ ನದಿ ಮಹಾಪೂರದಿಂದ ತುಂಬಿ ಹರಿಯುತ್ತಿತು. ನಾವಿಕರು ಶ್ರೀಗಳನ್ನು ನದಿ ದಾಟಿಸಿ ಬಸ್ತವಾಡ ಗ್ರಾಮಕ್ಕೆ ತಲುಪಿಸಲು ನಿರಾಕರಿಸಿದಾಗ ಶ್ರೀ ಕಾಡಸಿದ್ದೇಶ್ವರರು ಭಗವಂತನನ್ನು ಮನದಲ್ಲಿ ಪ್ರಾರ್ಥಿಸಿ ತಮ್ಮ ಮೈಮೇಲೆಯಿದ್ದ ಕಂಬಳಿಯನ್ನು ನೀರಿನ ಮೇಲೆ ಹಾಯಿಸಿ ಕುಳಿತರು ಕಂಬಳಿಯೂ ನೀರಿನ ಮೇಲೆ ಅತಿವೇಗದಿಂದ ತೆಲುತ್ತಾ ಬಸ್ತವಾಡ ಗ್ರಾಮದ ದಡ ತಲುಪಿಸಿತು. ಇಂತಹ ವಿಸ್ಮಯ ಶಕ್ತಿಯನ್ನು ಕಂಡ ಎರಡು ಗ್ರಾಮಗಳ ನದಿ ದಂಡೆಯ ಜನರು ಆಶ್ಚರ್ಯದಿಂದ ಭಕ್ತಿಪರವಶರಾಗಿ ಕೈಮುಗಿದು ನಿಂತರು. ಶ್ರೀ ಕಾಡಸಿದ್ದೇಶ್ವರರು ಸಾಮಾನ್ಯ ಮನುಷ್ಯರಲ್ಲ. ದೈವಸ್ವರೊಪಿ ಶಿವನ ಅವತಾರವೆಂದು ಕೊಂಡಾಡಿದರು ಎಂದು ಭಕ್ತರು ಹೇಳುವರು.

ಶ್ರೀ ಕಾಡಸಿದ್ದೇಶ್ವರ ಸೇವೆ ಮಾಡಿದ ಹಿಂದೂ, ಜೈನ್, ಮುಸ್ಲಿಂ ಧರ್ಮದ ಭಕ್ತರು ಗ್ರಾಮದ ಮಧ್ಯಭಾಗದಲ್ಲಿ ನೆಲೆನಿಂತಿರುವ ಗದ್ದುಗೆಯ ಪವಿತ್ರ ಸ್ಥಳದಲ್ಲಿ ಭವ್ಯವಾದ ದೇವಸ್ಥಾನ ನಿರ್ಮಿಸಿ, ಭಕ್ತಿ ಭಾವೈಕ್ಯತೆಯನ್ನು ಬಿಂಬಿಸಿದ್ದಾರೆ.
1998ರಲ್ಲಿ ಲಿಂಗಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮಾಡಿದರು. ಕೈತೋಟ, ಪತ್ರಿಬನ, ಹುಣಸೆಮರಗಳ ಮಧ್ಯೆ ಪ್ರಶಾಂತವಾದ ದೇವಸ್ಥಾನದ ಆವರಣದಲ್ಲಿ ದ್ವೀಪಸ್ತಂಭ, ಸಾಂಸ್ಕೃತಿಕಭವನ, ಪ್ರಸಾದ ನಿಲಯ, ಶ್ರೀ ಪವಾಡಸಿದ್ದೇಶ್ವರ ಮಂದಿರ, ಶ್ರೀ ಗಣೇಶ ಮಂದಿರ ಹಾಗೂ ಕಲ್ಯಾಣ ಮಂಟಪ ಕಟ್ಟಿಸಲಾಗಿದೆ.

ಕರ್ನಾಟಕ, ಮಹಾರಾಷ್ಟ್ರದಿಂದ ಸಾವಿರಾರು ಜನ ಭಕ್ತರು ಪ್ರತಿ ಸೋಮವಾರ ಮತ್ತು ಗುರುವಾರ ದೇವಸ್ಥಾನಕ್ಕೆ ಆಗಮಿಸಿ ಇಷ್ಠಾರ್ಥಸಿದ್ದಿಗಾಗಿ ಪೂಜೆ ಸಲ್ಲಿಸುವರು. ದೇವರ ಅಂಬಲಿ ಪ್ರಸಾದ ಸ್ವೀಕರಿಸಿ ಪುಣಿತರಾಗುವರು. ಶ್ರೀ ಕಾಡಸಿದ್ದೇಶ್ವರರು ಭಕ್ತರ ಮನೆದೇವರಾಗಿದ್ದರೆ ಮದುವೆ ಕಾರ್ಯಕ್ಕಿಂತ ಮುಂಚೆ ಅಗ್ಗಿ ಹಾಯುವ ವಾಡಿಕೆ ಇದೆ. ಸರ್ವಧರ್ಮಿಯರ ಆರಾಧ್ಯದೈವರಾದ ಶ್ರೀ ಕಾಡಸಿದ್ದೇಶ್ವರರಿಗೆ ಕವಲು ಹಚ್ಚುವದು, ರುದ್ರಾಭೀಷೇಕ, ವಿಶೇಷ ಪೂಜೆ, ದಂಡವತ್ತ ಹಾಕುವದು, ಗುಗ್ಗುಳೋತ್ಸವದ ಮಾಡಿಸುವರು ನಡೆದು ಬಂದ ಸಂಪ್ರದಾಯ.ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದ ಜೀರ್ನೋದ್ಧಾರಕ್ಕೆ ಕಮೀಟಿಯವರು ಹಗಲಿರುಳು ಜಾತ್ರಾ ಮಹೋತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

ಹುಕ್ಕೇರಿ ತಾಲೂಕು ಬಸ್ತವಾಡ ಗ್ರಾಮದೇವರಾದ ಶ್ರೀ ಕಾಡಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ (ಯುಗಾದಿ ಅಮವಾಸ್ಯೆಯಿಂದ) ಶನಿವಾರ ಮಾ.29ರಿಂದ ಬುಧವಾರ ಎ.2ರವರೆಗೆ 5 ದಿನಗಳ ಕಾಲ ಸಂಭ್ರಮದಿಂದ ಜರುಗಲಿದೆ.

The post ಭಾವೈಕ್ಯತೆಯ ಧ್ಯೋತಕ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದ ಶ್ರೀ ಕಾಡಸಿದ್ದೇಶ್ವರರ ಪುಣ್ಯಕ್ಷೇತ್ರ. appeared first on .

]]>
https://sunkadmedia.com/bhavaikyatheya-dhyotaka-hukkeri/feed/ 0 248